Job Description: * ಪ್ರಸ್ತುತ ಚಿಲಿ ದೇಶದ ನೂತನ ಅಧ್ಯಕ್ಷರಾಗಿ ಗೇಬ್ರಿಯಲ್ ಬೋರಿಕ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಎಡಪಂಥೀಯ ವಿಚಾರವಾದಿ ಯಾಗಿದ್ದಾರೆ. * ಪ್ರಸ್ತುತ ಆರ್ಥಿಕವಾಗಿ ಸಮೃದ್ಧವಾಗಿರುವ ದೇಶವಾಗಿರುವ ಚಿಲಿಯಲ್ಲಿ ಹೆಚ್ಚಿನ ಮಟ್ಟದ ಅಸಮಾನತೆಯ ವಿಷಯದ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತಪಡಿಸಲಾಗುತ್ತಿದೆ ಎಂದಿದ್ದಾರೆ. * ಸರಿ ಸುಮಾರು 17 ವರ್ಷಗಳ ಕಾಲ ಈ ದೇಶವನ್ನು ಆಳಿರುವ ಮಿಲಿಟರಿಯು ತನ್ನ ಸರ್ವಾಧಿಕಾರದಿಂದ ಚಿಲಿ ದೇಶವನ್ನು ಅಂತ್ಯಗೊಳಿಸಿದೆ, ಇದೀಗ ಈ ದೇಶವು ಮಿಲಿಟರಿ ಆಡಳಿತದಿಂದ ಅಂತ್ಯಗೊಂಡು '04' ವರ್ಷಗಳು ಕಳೆದಿವೆ. * ಗೇಬ್ರಿಯಲ್ ಬೋರಿಕ್ ಅವರು ತಮ್ಮ ಕ್ಯಾಬಿನೆಟ್'ಗೆ ಸುಮಾರು 14 ಮಹಿಳೆಯರನ್ನು ಸೇರಿಸಿಕೊಂಡು ಇದನ್ನು "ಸ್ತ್ರೀವಾದಿ ಕ್ಯಾಬಿನೆಟ್" ಎಂದು ಗುರುತಿಸಿದ್ದಾರೆ. ಹಾಗೂ ಇನ್ನು 10 ಜನರು ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. * ಕಳೆದ ವರ್ಷದ ಡಿಸೆಂಬರ್ ಚುನಾವಣೆಯಲ್ಲಿ ಗೇಬ್ರಿಯಲ್ ಬೋರಿಕ್ ಅವರು 56% ಮತಗಳನ್ನೂ ಪಡೆದುಕೊಂಡು ಕನ್ಸರ್ವೇಟಿವ್ ಜಾಝ್ ಆಂಟೋನಿಯಾ ಕ್ಯಾಸ್ಟ್ ಅವರನ್ನು ಸೋಲಿಸುವ ಮೂಲಕ ಅಧಿಕಾರವನ್ನು ಪಡೆದುಕೊಂಡಿದ್ದಾರೆ. * ಚಿಲಿಯು 6,000 ಕಿ.ಮೀ ಗಿಂತ ಅಧಿಕ ಪೆಸಿಫಿಕ್ ಸಾಗರದ ಕರಾವಳಿಯನ್ನು ಹೊಂದಿದೆ. ಇದೊಂದು ದಕ್ಷಿಣ ಅಮೆರಿಕಾದ ಪಶ್ಚಿಮ ಅಂಚಿನಲ್ಲಿ ವ್ಯಾಪಿಸಿರುವ ಕಿರಿದಾದ ದೇಶವಾಗಿದೆ. ಇದರ ರಾಜ್ಯಧಾನಿ ಸ್ಯಾಂಟಿಯಾಗೊ. ಪ್ರಸ್ತುತ ಆಂಡಿಸ್ ಹಾಗೂ ಚಿಲಿಯ ಕರಾವಳಿ ಶ್ರೇಣಿಯ ಪರ್ವತಗಳಿಂದ ಸುತ್ತುವರಿಡಿರುವ ಕಣಿವೆಯಲ್ಲಿದೆ. ಈ ದೇಶದ ನಗರವು ಪಾಮ್-ಲೈನ್ ಪ್ಲಾಜಾ ಡಿ ಅರ್ಮಾಸ್ ನಿಯೋಕ್ಲಾಸಿಕಲ್ ಕ್ಯಾಥೆಡ್ರಲ್ ಹಾಗೂ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂ'ನ್ನು ಒಳಗೊಂಡಿದೆ. * ಪ್ರಸ್ತುತ ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಚಿಲಿ ದೇಶದ 36 ನೇ ಹಾಗೂ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ, 2022 ರ ಮಾರ್ಚ್. 11 ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ಬೋರಿಕ್ ಅವರು ಎರಡು ಬಾರಿ ಮ್ಯಾಗಲನ್ಸ್ ಹಾಗೂ ಅಂಟಾರ್ಕ್ಟಿಕ್ ಜಿಲ್ಲೆಯನ್ನು ಪ್ರತಿನಿಧಿಸುವ ಚೇಂಬರ್ ಆಫ್ ಡೆಪ್ಯೂಟೀಸ್‌ಗೆ ಚುನಾಯಿತರಾದ್ದರು, ಈ ಮೊದಲು 2013 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ,ಹಾಗೂ ಮತ್ತೇ 2017 ರಲ್ಲಿ ಬ್ರಾಡ್ ಫ್ರಂಟ್‌ನ ಭಾಗವಾಗಿದ್ದರು. * ಬೋರಿಕ್ ಅವರು ವಿಶ್ವದ 2 ನೇ ಕಿರಿಯ ರಾಜ್ಯ ನಾಯಕರಾಗಿದ್ದಾರೆ, ಹಾಗೆಯೇ ಇವರು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿರುವ ಅಧ್ಯಕ್ಷರು ಇವರಾಗಿದ್ದಾರೆ.