Job Description: * ಮರದ ಕಾಂಡದಂತೆ ಒಂದೇ ಕಂಬದ ಮೇಲೆ ಸೌರಶಕ್ತಿ ತಂತ್ರಜ್ಞಾನವನ್ನು ಅಳವಡಿಸುವ ರಚನೆಯನ್ನು ಸೌರ ಮರ ಎಂದು ಕರೆಯಲಾಗುತ್ತದೆ. ಇದೊಂದು ಕ್ರಿಯಾತ್ಮಕ ವಿದ್ಯುತ್ ಜನರೇಟರ್ ಅಥವಾ ಸೌರ ಕಲಾಕೃತಿಯಾಗಿದೆ. * ಅನೇಕ ಸೌರ ಮರಗಳನ್ನು ಸ್ಥಾಪಿಸುವ ಉದ್ದೇಶದಿಂದ, ನವೀಕರಿಸಬಹುದಾದ ಶಕ್ತಿಯ ಅಳವಡಿಕೆಯನ್ನು ಉತ್ತೇಜಿಸಲಾಗಿದೆ. ಮೇಲ್ಛಾವಣಿ ಸೌರ ವ್ಯವಸ್ಥೆಗಳು ಹಾಗೂ ಶಕ್ತಿಯನ್ನು ಕಲ್ಪಿಸುವ ಮೂಲಕ ಅವುಗಳನ್ನು ಸಾಮಾನ್ಯವಾಗಿ ಆಸ್ತಿಗೆ ಶಕ್ತಿಯ ಪ್ರಾಥಮಿಕ ಮೂಲವಾಗಿ ಬಳಕೆ ಮಾಡಲಾಗುವದಿಲ್ಲ. * ಸೌರ ಮರಗಳು ಮೇಲ್ಛಾವಣಿಯ ಸೌರ ವ್ಯವಸ್ಥೆಗಳು ಅಥವಾ ಇತರ ಹಸಿರು ಕಟ್ಟಡ ಉಪಕ್ರಮಗಳಿಗೆ ಪೂರಕವಾಗಿವೆ. ದೊಡ್ಡ ಹೂಡಿಕೆಗಳು ಹಾಗೂ ಅವುಗಳ ಪರಿಸರ ಪ್ರಯೋಜನಗಳನ್ನು ತೋರಿಸುತ್ತದೆ. ಸೌರ ಮರಗಳು ಸೌರ ತಂತ್ರಜ್ಞಾನದ ಉತ್ಸಾಹ ಹಾಗೂ ಜಾಗೃತಿಯನ್ನು ಉತ್ತೇಜಿಸಲು ಹಾಗೂ ನೆರಳು ಮತ್ತು ಸಭೆಯ ಸ್ಥಳಗಳನ್ನು ಕಲ್ಪಿಸುತ್ತದೆ. * ಭಾರತದಲ್ಲಿ ಸೌರ ಮರಗಳ ಬಳಕೆಯಿಂದಾಗಿ 'ಸುಸ್ಥಿರ ಬೆಳವಣಿಗೆಗೆ ಶಕ್ತಿ' ಬಗ್ಗೆ ಪ್ರಧಾನಿ ಮೋದಿ ಅವರು ವೆಬ್‌ನಾರ್‌ನಲ್ಲಿ ಚರ್ಚಿಸಿದ್ದಾರೆ. ಇದೀಗ ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದ್ದಾರೆ. ಪ್ರಸ್ತುತ ದೇಶದ ಜನರು ತಮ್ಮದೇ ಆದ ಸೌರ ಮರಗಳನ್ನು ಅಭಿವೃದ್ಧಿಪಡಿಸಲು ಹೇಳಿದ್ದಾರೆ. ಇದರಿಂದಾಗಿ 15% ರಷ್ಟು ವಿದ್ಯುತ್ ಉಳಿಸಲು ಸಹಾಯಕಾರಿ ಯಾಗಲಿದೆ ಎಂದಿದ್ದಾರೆ. * ಭಾರತದಲ್ಲಿ ಸೌರ ಮರವು ಈ ಹಿಂದೆ 2016 ರಲ್ಲಿ, ದುರ್ಗಾಪುರದ CSIR-ಸೆಂಟ್ರಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್, ನವೀಕರಿಸಬಹುದಾದ ಶಕ್ತಿಯ ಪಾಲನ್ನು ಹೆಚ್ಚಿಸುವ ಉದ್ದೇಶದಿಂದ ದೇಶದಲ್ಲಿನ ವಿದ್ಯುತ್ ಬಿಕ್ಕಟ್ಟನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಳ್ಳಿಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪವರ್ ಗ್ರಿಡ್ ವ್ಯವಸ್ಥೆಗಳಲ್ಲಿ ಬಳಸಲು ಸೌರ ವೃಕ್ಷದ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.