Job Description: * ಪ್ರಸ್ತುತ ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸುವ ‘ಸಂಭವ’ ಹಾಗೂ ‘ಸ್ವವ್ಲಂಬನ್’ ಉಪಕ್ರಮಗಳು. * ಇದೀಗ ಪ್ಲಾಸ್ಟಿಕ್ ಮರುಬಳಕೆ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ (MSME) ರಾಜ್ಯ ಸಚಿವರಾಗಿರುವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ‘ಸಂಭವ’ ಹಾಗೂ ‘ಸ್ವವ್ಲಾಂಬನ್’ ಉಪಕ್ರಮಗಳನ್ನು ಆರಂಭಿಸಿದ್ದಾರೆ. * ವಿಶೇಷವಾಗಿ ಈ ಉಪಕ್ರಮಗಳು ಭಾರತದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿವೆ. ಪ್ರಸ್ತುತ ಪ್ಲಾಸ್ಟಿಕ್ಸ್ ಮರುಬಳಕೆ ಹಾಗೂ ತ್ಯಾಜ್ಯ ನಿರ್ವಹಣೆಯ ಬಗೆಗಿನ ಅಂತರಾಷ್ಟ್ರೀಯ ಶೃಂಗಸಭೆಯ 2-ದಿನಗಳು ನಡೆಯುವ ಸಭೆಯಾಗಿದೆ. ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ (MSMEs) ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಈ ಶೃಂಗಸಭೆಯುನ್ನು 2022 ರ ಮಾರ್ಚ್. 4 ಹಾಗೂ 5 ರಂದು ಉದ್ಘಾಟಿಸಿದರು. * MSME ಸಚಿವಾಲಯವು ಈ ಶೃಂಗಸಭೆಯನ್ನು ಅಖಿಲ ಭಾರತ ಪ್ಲಾಸ್ಟಿಕ್ ತಯಾರಕರ ಸಂಘದ ಸಹಯೋಗ ಜೊತೆಗೆ ನವದೆಹಲಿಯಲ್ಲಿ ಆಯೋಜಿಸಿದೆ. 'ನಿಮ್ಮ ತ್ಯಾಜ್ಯವನ್ನು ತಿಳಿಯಿರಿ ಹಾಗೂ ಮರುಬಳಕೆ ಮಾಡುವುದು ಅದನ್ನು ಸರಿಯಾದ ಕೆಲಸ, ಹಾಗೂ ಸರಿಯಾದ ರೀತಿಯಲ್ಲಿ ಮಾಡಬೇಕು ಎಂಬುವದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿದೆ. ಹಾಗೂ ಈ ಶೃಂಗಸಭೆಯನ್ನು ಹೈಬ್ರಿಡ್ ಮೋಡ್‌ನಲ್ಲಿ ನಡೆಸಲಾಗುತ್ತದೆ ಇದರಲ್ಲಿ ಸುಮಾರು 1350 MSME ಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. * ಪ್ರಸ್ತುತ ಈ ಶೃಂಗಸಭೆಯುಲ್ಲಿ ಉದ್ಯಮಿಗಳು, ತಜ್ಞರು, ಹಾಗೂ ಮಧ್ಯಸ್ಥಗಾರರಿಗೆ MSME ವಲಯ ಹಾಗೂ ಪ್ಲಾಸ್ಟಿಕ್ ವಲಯಗಳಲ್ಲಿನ ಸವಾಲುಗಳು ಹಾಗೂ ಅದರ ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆಯನ್ನು ಕಲ್ಪಿಸುತ್ತದೆ. ಅಷ್ಟೇ ಅಲ್ಲದೇ ಪ್ಲಾಸ್ಟಿಕ್ ವಲಯದಲ್ಲಿ ಹೊಸ ಜೀವನೋಪಾಯ ಹಾಗೂ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ. ಹಾಗೂ ಅದೇ ಸಂಧರ್ಭದಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಹಾಗೂ ಪರಿಸರ ಗುರಿಗಳನ್ನು ಪೂರೈಕೆ ಮಾಡಲು ಈ ಸಭೆಯು ಭಾರತಕ್ಕೆ ಸಹಾಯ ಮಾಡಲಿದೆ. * ‘ಸಂಭವ’ ಹಾಗೂ ‘ಸ್ವವ್ಲಾಂಬನ್’ ಉಪಕ್ರಮಗಳು ಹಾಗೂ ಶೃಂಗಸಭೆಯು ಬಹು ಪ್ರಯೋಜನಗಳನ್ನು ಒಳಗೊಂಡಿರುತ್ತದೆ MSME ವಲಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ. * ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯದ (MSME) ವಾರ್ಷಿಕ ವರದಿಗಳು ನೀಡಿರುವ ಅಂಕಿ ಅಂಶಗಳು ಹಾಗೂ ಖಾದಿ ವಲಯಕ್ಕೆ ಖರ್ಚು ಮಾಡಿದ ಯೋಜನಾ ಮೊತ್ತವು ಸುಮಾರು 1942.7 ಮಿಲಿಯನ್‌ನಿಂದ 14,540 ಮಿಲಿಯನ್‌ಗೆ ಹಾಗೂ ಯೋಜನೇತರ ಮೊತ್ತವು ಸುಮಾರು 437 ಮಿಲಿಯನ್‌ನಿಂದ 2291 ಮಿಲಿಯನ್ ಏರಿಕೆಯನ್ನು ಕಂಡಿದೆ. 1994-95 ರಿಂದ 2014-2015 ರ ನಡುವೆ ಖಾದಿ ಸಂಸ್ಥೆಗಳಿಗೆ ಬಡ್ಡಿ ಸಬ್ಸಿಡಿಗಳು 96.3 ಮಿಲಿಯನ್‌ನಿಂದ 314.5 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.