Job Description: * ಇದೇ 2022 ರ ಮಾರ್ಚ್. 4 ರಂದು, ಬಾಂಗ್ಲಾದೇಶದಲ್ಲಿನ ಭಾರತದ ಹೈ ಕಮಿಷನರ್ ವಿಕ್ರಮ್ ದೊರೈಸ್ವಾಮಿ ಹಾಗೂ ಬಾಂಗ್ಲಾದೇಶದ ಶಿಕ್ಷಣ ಸಚಿವರಾದ ದೀಪು ಮೋನಿ ಅವರು ಢಾಕಾದಲ್ಲಿ ಎರಡು ದಿನಗಳ ಅಧ್ಯಯನ 2022 ರ ಸಭೆಯ ಉದ್ಘಾಟಣೆಯನ್ನು ನೆರವೇರಿಸಿದ್ದಾರೆ. ಇದರ ನಂತರ ಬಾಂಗ್ಲಾದೇಶದ ಶಿಕ್ಷಣ ಸಚಿವರು ಉಭಯ ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಶೈಕ್ಷಣಿಕ ವಿನಿಮಯದ ಪ್ರಾಮುಖ್ಯತೆ ಇದೇ ಎಂದು ತಿಳಿಸಿದರು. ಇದೀಗ ಪ್ರಸ್ತುತ ಭಾರತೀಯ ಹೈಕಮಿಷನ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. * ಸ್ಟಡಿ ಇನ್ ಇಂಡಿಯಾ ಕಾರ್ಯಕ್ರಮವು ಉಭಯ ದೇಶಗಳ ಭವಿಷ್ಯದ ಪೀಳಿಗೆಗೆ ಪರಸ್ಪರ ಲಾಭದಾಯಕ ಹಾಗೂ ಉದ್ಯಮಗಳಲ್ಲಿ ಭಾಗಿಯಾಗುವ ಸುವರ್ಣ ಅವಕಾಶವನ್ನು ಒದಗಿಸುತ್ತದೆ. * ಪ್ರಸ್ತುತ ಭಾರತೀಯ ಹೈಕಮಿಷನ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾರತದ ಕೆಲವು ಪ್ರಮುಖ ಸಂಸ್ಥೆಗಳು ಹಾಗೂ ವಿದೇಶದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಅನ್ವೇಷಿಸಿದರು. ಪ್ರಸ್ತುತ ಢಾಕಾದಲ್ಲಿ ಆಯೋಜಿಸಲಾದ ಶಿಕ್ಷಣ ಮೇಳದಲ್ಲಿ ಭಾರತೀಯ 19 ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. * ಇದೀಗ ಬಾಂಗ್ಲಾದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಿತ್ತಗಾಂಗ್‌ನಲ್ಲಿ ಸ್ಟಡಿ ಇನ್ ಇಂಡಿಯಾ ಸಭೆಯನ್ನು ಇದೇ ಮಾರ್ಚ್. 7 ರಂದು ಆಯೋಜಿಸಲಾಗುತ್ತಿದೆ. * ಭಾರತೀಯ ಶಿಕ್ಷಣ ಸಚಿವಾಲಯದ ಪ್ರಮುಖ ಯೋಜನೆಯಾಗಿರುವ ಸ್ಟಡಿ ಇನ್ ಇಂಡಿಯಾವನ್ನು ಈ ಹಿಂದೆ 2018 ರಲ್ಲಿ ಆರಂಭಿಸಲಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣವನ್ನು ಮುನ್ನಡೆಸಲು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮವು ಪ್ರೋತ್ಸಾಹಿಸುತ್ತದೆ. ಅಷ್ಟೇ ಅಲ್ಲದೇ ಈ ಕಾರ್ಯಕ್ರಮವು ಪ್ರಪಂಚದಾದ್ಯಂತ ಇರುವ ವಿದ್ಯಾರ್ಥಿ ಭ್ರಾತೃತ್ವವನ್ನು ಭಾರತಕ್ಕೆ ಬರಮಾಡಿಕೊಳ್ಳಲು ಹಾಗೂ ರಾಷ್ಟ್ರದ ಉನ್ನತ ಸಂಸ್ಥೆಗಳಿಂದ ಒಳ್ಳೆಯ ರೀತಿಯ ಶೈಕ್ಷಣಿಕ ಕಲಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. * ಪ್ರಸ್ತುತ ಭಾರತದಲ್ಲಿನ ಈ ಅಧ್ಯಯನವು ಆರಂಭದಿಂದಲೂ ಸಾರ್ಕ್, ಆಗ್ನೇಯ ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಮಧ್ಯ ಏಷ್ಯಾ ಸೇರಿದಂತೆ ಸುಮಾರು 150 ದೇಶಗಳ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆದಿದೆ.