* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಚಂದ್ರಯಾನ 3 ಮಿಷನ್ ಲ್ಯಾಂಡ್ ಆದ ಪ್ರದೇಶ ಈಗ ಅಧಿಕೃತವಾಗಿ ಶಿವ ಶಕ್ತಿ ಪಾಯಿಂಟ್ ಎನಿಸಿದ್ದು, ಚಂದ್ರಯಾನ 3 ಮಿಷನ್ ಲ್ಯಾಂಡ್ ಆದ ಪ್ರದೇಶವನ್ನು ಶಿವಶಕ್ತಿ ಎಂಬುದಾಗಿ ಕರೆಯಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟವು ಮಾರ್ಚ್ 19ರಂದು ಅನುಮತಿ ನೀಡಿದೆ.* ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 26 ರಂದು ಚಂದ್ರಯಾನ 3 ರ ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಸೈಟ್ ಅನ್ನು ಶಿವಶಕ್ತಿ ಎಂದು ಹೆಸರಿಸಲಾಗುವುದು ಎಂದು ಘೋಷಿಸಿದ್ದರು.*  “ಭಾರತೀಯ ಪುರಾಣಶಾಸ್ತ್ರದ ಪ್ರಕಾರ, ಶಿವ ಎಂಬ ಪುಲ್ಲಿಂಗ ಹೆಸರು ಹಾಗೂ ಶಕ್ತಿ ಎಂಬ ಸ್ತ್ರೀಲಿಂಗದ ಹೆಸರು ಸಮೀಕರಣಗೊಂಡು ಶಿವಶಕ್ತಿಯಾಗಿದೆ. ಇಸ್ರೋದ ಚಂದ್ರಯಾನ 3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗವೀಗ ಶಿವಶಕ್ತಿ ಎಂದು ಕರೆಯಲಾಗುತ್ತದೆ.