* ಭಾರತೀಯ ನೌಕಾಪಡೆಯು ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಗಳ ನಡುವೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ 11 ಜಲಾಂತರ್ಗಾಮಿ ನೌಕೆಗಳು, ಹಾಗೂ 35 ಯುದ್ಧನೌಕೆಗಳ ಕಾರ್ಯಚರಣೆಯ ಬೃಹತ್ ಪ್ರಮಾಣದ ಯುದ್ಧ ನೌಕೆಗಳನ್ನು ನಿಯೋಜಿಸಿದೆ.* 10 ಯುದ್ಧನೌಕೆಗಳನ್ನು ಉತ್ತರ ಅರೇಬಿಯನ್ ಸಮುದ್ರ, ಕೆಂಪು ಸಮುದ್ರ, ಮತ್ತು ಏಡೆನ್ ಕೊಲ್ಲಿ ಮತ್ತು ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳು ಮತ್ತು ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ಹೊಡೆದ ಹಡಗುಗಳಿಗೆ ಪ್ರತಿಕ್ರಿಯೆಗಾಗಿ ನಿಯೋಜಿಸಿದೆ.* ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಅಸ್ತಿತ್ವವನ್ನು ತಗ್ಗಿಸಲು ದೇಶದ ಪಶ್ಚಿಮ ಸಮುದ್ರದಲ್ಲಿ ವಾಣಿಜ್ಯ ಹಡಗುಗಳಿಗೆ ರಕ್ಷಣೆ ಒದಗಿಸಲು ಈ ನೌಕೆಗಳನ್ನು ನಿಯೋಜನೆ ಮಾಡಲಾಗಿದೆ.* ಹಿಂದೂ ಮಹಾಸಾಗರದಲ್ಲಿ 11 ಜಲಾಂತರ್ಗಾಮಿ ನೌಕೆಗಳು, 35 ಯುದ್ಧ ನೌಕೆಗಳು ಮಾತ್ರವೇ ಅಲ್ಲದೆ ಐದು ವಿಮಾನಗಳು ಕೂಡ ಸಮುದ್ರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ಪೈಕಿ 10 ಯುದ್ಧನೌಕೆಗಳು ಪಶ್ಚಿಮದ ಸಮುದ್ರದಲ್ಲಿವೆ. * ಈ ಪ್ರದೇಶವು ವಾಣಿಜ್ಯ ಉದ್ದೇಶದ ಹಡಗುಗಳಿಗೆ ಸುರಕ್ಷಿತವಾಗುವವರೆಗೂ ನಿಯೋಜನೆ ಮುಂದುವರಿಯಲಿದೆ' ಎಂದು ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಮಾರ್ಚ್ 23 ರಂದು (ಶನಿವಾರ) ತಿಳಿಸಿದ್ದಾರೆ.