* ಚೀನಾ ವಾಯುವ್ಯ ಚೀನಾದ ಗೋಬಿ ಮರುಭೂಮಿಯ ಅಂಚಿನಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆಂಝೌ-18 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. * ಜಿಯುಕ್ವಾನ್‌ ಸ್ಯಾಟಿಲೈಟ್ ಲಾಂಚ್ ಸೆಂಟರ್‌ನಿಂದ ಲಾಂಗ್ ಮಾರ್ಚ್ 2-ಎಫ್ ರಾಕೆಟ್ ಮೇಲೆ ಉಡಾವಣೆಯು ರಾತ್ರಿ 8.59ಕ್ಕೆ (1259 ಜಿಎಂಟಿ) ಶೆನ್‌ಝು ಪ್ರಯಾಣ ಆರಂಭಿಸಿತು. * ಶೆನ್‌ಝೌ-18 ಸಿಬ್ಬಂದಿ ಕಮಾಂಡರ್ ಯೆ ಗುವಾಂಗ್‌ಫು, ಶೆನ್‌ಝೌ-13 ಮಿಷನ್‌ನ ಅನುಭವಿ ಗಗನಯಾತ್ರಿ, ಜೊತೆಗೆ ಹೊಸಬರಾದ ಲಿ ಕಾಂಗ್ ಮತ್ತು ಲಿ ಗುವಾಂಗ್ಸು, ಇಬ್ಬರೂ ಮಾಜಿ ಫೈಟರ್ ಪೈಲಟ್‌ಗಳನ್ನು ಒಳಗೊಂಡಿದೆ. * ಶೇನ್ ಝು-18 ಬಾಹ್ಯಾಕಾಶ ನೌಕೆಯ ಉದ್ದೇಶಗಳು : - ವೈಜ್ಞಾನಿಕ ಪ್ರಯೋಗ ನಡೆಸುವುದು.- ಬಾಹ್ಯಾಕಾಶ ತ್ಯಾಜ್ಯ ರಕ್ಷಣಾ ಸಾಧನದ ಸ್ಥಾಪನೆ.- ಪೇಲೋಡ್ ಪ್ರಯೋಗಗಳನ್ನು ನಡೆಸುವುದು.- ವೈಜ್ಞಾನಿಕ ಶಿಕ್ಷಣವನ್ನು ಜನಪ್ರಿಯಗೊಳಿಸುವುದು.