Job Description: * ಚೀನಾದ ನೂತನ ರಕ್ಷಣಾ ಸಚಿವರಾಗಿ ನೌಕಾ ಪಡೆಯ ಮಾಜಿ ಕಮಾಂಡರ್ ಡಾಂಗ್‌ ಜನ್‌ ಅವರನ್ನು ನೇಮಿಸಲಾಗಿದೆ. ಚೀನಾಸ್ ಪೀಪಲ್ಸ್ ನ್ಯಾಷನಲ್‌ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯ ಸಭೆಯಲ್ಲಿ ಡಾಂಗ್ ಜ‌ನ್‌ ಅವರನ್ನು ನೇಮಕ ಮಾಡುವ ಕುರಿತು ನಿರ್ಧರಿಸಲಾಯಿತು ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ* ಚೀನಾ ದೇಶದ ಅನೇಕ ಉನ್ನತ ಹುದ್ದೆಗಳಲ್ಲಿದ್ದ ಮಿಲಿಟರಿ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ಅಲ್ಲದೆ ಪ್ರಸಕ್ತ ವರ್ಷಾದ್ಯಂತ ಹಿಂದಿನ ರಕ್ಷಣಾ ಸಚಿವ ಶಾಂಗ್ಫು ಹಾಗೂ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರನ್ನು ಕೂಡ ವಜಾಗೊಳಿಸಿದ ಬಳಿಕ ಸದ್ಯ ಈ ಬೆಳವಣಿಗೆ ನಡೆದಿದೆ. * ಒಂಬತ್ತು ಹಿರಿಯ ಮಿಲಿಟರಿ ಅಧಿಕಾರಿಗಳನ್ನು ಸ್ಥಾಯಿ ಸಮಿತಿಯಿಂದ ತೆಗೆದುಹಾಕಲಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ಕ್ಸಿನ್ಹುವಾವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. * ಡಾಂಗ್ ಜನ್ ಅವರು ಚೀನೀ ಮಿಲಿಟರಿಯ ಸದರ್ನ್ ಥಿಯೇಟರ್ ಕಮಾಂಡ್‌ನ ಕಮಾಂಡರ್ ಮತ್ತು ಉಪ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಇದು ದಕ್ಷಿಣ ಚೀನಾ ಸಮುದ್ರವನ್ನು ಕೂಡ ಒಳಗೊಂಡಿದೆನೇಮಕ