* ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರವಿಂದ್ ಪನಗರಿಯಾ ಅವರನ್ನು 16 ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ನೇಮಿಸಲಾಗಿದೆ. 2015 ರಿಂದ 2017ರವರೆಗೆ ಪನಗಾರಿಯಾ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದರು.* ಸಂವಿಧಾನದ 280(1)ನೇ ವಿಧಿಯ ಅನ್ವಯ ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗವನ್ನು ರಚಿಸಿದೆ.* ಐದು ವರ್ಷಕ್ಕೊಮ್ಮೆ ರಚನೆಯಾಗುವ ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ತೆರಿಗೆ ಹಂಚಿಕೆ ಬಗ್ಗೆ ಸಲಹೆ ಸೂಚನೆ ನೀಡಲಿದೆ. ತೆರಿಗೆ ಹಂಚಿಕೆ ಜತೆಗೆ ಆದಾಯ ವೃದ್ಧಿಯ ಉಪಕ್ರಮಧಿಗಳು, ವಿಪತ್ತು ನಿರ್ವಹಣೆ ವೇಳೆ ರಾಜ್ಯಗಳಿಗೆ ಹಣಕಾಸು ನೆರವು ನೀಡುವ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲಿದೆ.* ಪನಗಾರಿಯಾ ಅವರು ಈ ವರ್ಷದ ಆರಂಭದಲ್ಲಿ 2026ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತದೆ ಎಂದು ಹೇಳಿದ್ದರು. ಹಾಗೂ ಏತನ್ಮಧ್ಯೆ, ರಿತ್ವಿಕ್ ರಂಜನಂ ಪಾಂಡೆ ಅವರು ಆಯೋಗದ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.* ಅರವಿಂದ್ ಪನಗಾರಿಯಾ ಅವರು ಭಾರತ-ಅಮೆರಿಕನ್ ಪ್ರಮುಖ ಆರ್ಥಿಕ ತಜ್ಞ ಎಂದು ಗುರುತಿಸಿಕೊಂಡಿದ್ದಾರೆ. * ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಆರ್ಥಿಕ ಸಂಬಂಧಿತ ವಿಚಾರಗಳ ಬಗ್ಗೆಯೂ ಸಲಹೆ ಸೂಚನೆ ನೀಡಲಿದೆ. 2026-27ರಿಂದ 2030-31ರ ಅವಧಿಗೆ (ಐದು ವರ್ಷ) ಆರ್ಥಿಕ ವರದಿಯನ್ನು ಪನಗಾರಿಯಾ ಸಾರಥ್ಯದ ಆಯೋಗ ಸಿದ್ಧಪಡಿಸಲಿದೆ.