* ಎರಡು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಹಾಲಿವುಡ್ ನ ಖ್ಯಾತ ನಟ ಟಾಮ್  ವಿಲ್ಕಿನ್ಸ್ ಅವರು ತಮ್ಮ 75ನೇ ವಯಸ್ಸಿನಲ್ಲಿ ಡಿಸೆಂಬರ್ 30ರಂದು ನಿಧನರಾಗಿದ್ದಾರೆ.* ನಟನ ಸಾವನ್ನು ಅವರ ಕುಟುಂಬದ ಪರವಾಗಿ ಅವರ ಏಜೆಂಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ದೃಢಪಡಿಸಲಾಗಿದೆ. ಟಾಮ್ ವಿಲ್ಕಿನ್ಸನ್ ಡಿಸೆಂಬರ್ 30 ರಂದು ಮನೆಯಲ್ಲಿ ಇದ್ದಕ್ಕಿದ್ಯಂತೆ ನಿಧನರಾದರು ಎಂದು ತಿಳಿಸಿದೆ.* 2001ರಲ್ಲಿ "ಇನ್ ದಿ ಬೆಡ್ ರೂಮ್' ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು ಮತ್ತು 2007ರಲ್ಲಿ "ಮೈಕೆಲ್ ಪ್ಲೇಟನ್" ಚಿತ್ರದಲ್ಲಿನ ಪೋಷಕ ಪಾತ್ರಕ್ಕಾಗಿ ಮತ್ತೊಮ್ಮೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.*  ಅವರು ಇತ್ತೀಚೆಗೆ ತಮ್ಮ "ಫುಲ್ ಮಾಂಟಿ" ಸಹನಟರಾದ ರಾಬರ್ಟ್ ಕಾರ್ಲೈಲ್ ಮತ್ತು ಮಾರ್ಕ್ ಅವರೊಂದಿಗೆ ಅದೇ ಹೆಸರಿನ ಡಿಸ್ನಿ ಸರಣಿಯಲ್ಲಿ ನಟಿಸಿದ್ದರು.