Job Description: * ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಹಸಿರು ಪರಿಸರ ನಿಧಿಗೆ 2 ಬಿಲಿಯನ್ ಡಾಲರ್ ಒದಗಿಸುವುದಾಗಿ ಭಾರತದ ಜಿ-20 ಶೃಂಗ ಸಭೆಯಲ್ಲಿ ತಿಳಿಸಿದ್ದಾರೆ. ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಬ್ರಿಟನ್ * ದೇಶವೊಂದು ನೀಡಿದ ಅತಿದೊಡ್ಡ ಆರ್ಥಿಕ ನೆರವಾಗಿದೆ. ಕೋಪನ್ ಹೇಗನ್ ಒಪ್ಪಂದದ ನಂತರ 194 ದೇಶಗಳು ಈ ನಿಧಿಯನ್ನು ಸ್ಥಾಪಿಸಿದ್ದು, ತಮ್ಮ ದೇಶಗಳಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆ ಪರಿಣಾಮಗಳನ್ನು ಎದುರಿಸಲು ದುರ್ಬಲ ಆರ್ಥಿಕತೆಗಳನ್ನು ಬೆಂಬಲಿಸಲು ಒಟ್ಟಾಗಿ ಕೆಲಸ ಮಾಡಲು ಜಿ-20 ನಾಯಕರಿಗೆ ರಿಷಿ ಸುನಕ್ ಕರೆ ನೀಡಿದ್ದಾರೆ.