*ಛತ್ರಪತಿ ಶಿವಾಜಿ ಬಳಸಿದ್ದ ಅಪರೂಪದ 'ವಾಘ್ ನಖ್' ಡ್ಯಾಗರ್ (ಅಮೂಲ್ಯವಾದ ಕಲಾಕೃತಿ)ಗಳನ್ನು ಬ್ರಿಟನ್‌ನಿಂದ ಮರಳಿ ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಇತ್ತೀಚಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯವು  ತಿಳಿಸಿದೆ. *ಉಕ್ಕಿನಿಂದ ಮಾಡಿದ ವಾಘ್ ನಖ್, ಅಧಿಕಾರಿಗಳ ಪ್ರಕಾರ ಮೊದಲ ಮತ್ತು ನಾಲ್ಕನೇ ಬೆರಳುಗಳಿಗೆ ಎರಡು ಉಂಗುರಗಳನ್ನು ಹೊಂದಿರುವ ಬಾರ್‌ನಲ್ಲಿ ನಾಲ್ಕು ಉಗುರುಗಳನ್ನು ಒಳಗೊಂಡಿದೆ. ಈ ವಿಷಪೂರಿತ ವಾಘ್ ನಖ್ ಅನ್ನು ರಜಪೂತರು ಶತ್ರುಗಳನ್ನು ಹತ್ಯೆಮಾಡಲು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಮತ್ತು ಮರಾಠ ನಾಯಕ ಛತ್ರಪತಿ ಶಿವಾಜಿ ಬಿಜಾಪುರದ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಲ್ಲಲು ಬಿಚುವಾ ಮತ್ತು ವಾಘ್ ನಖ್ ಅನ್ನು  ಉಪಯೋಗಿಸಿದ್ದ.*'ಬಿಚುವಾ ಮತ್ತು ವಾಘ್ ನಖ್'ಇದು ನಿಹಾಂಗ್ ಸಿಖ್ಖರ ಜನಪ್ರಿಯ ಆಯುಧವಾಗಿದೆ, ಇದನ್ನು ಮೊದಲು ಮರಾಠ ನಾಯಕ ಛತ್ರಪತಿ ಶಿವಾಜಿ ಬಳಸಿದ್ದನು ಎಂಬ ಉಲ್ಲೇಖಗಳೂ ಇವೆ.  *ಹಿಂದೂ ಕ್ಯಾಲೆಂಡರ್‌ನ ಆಧಾರದ ಮೇಲೆ ಶಿವಾಜಿ ಅಫ್ಜಲ್ ಖಾನ್‌ನನ್ನು ಕೊಂದ ದಿನದ ವಾರ್ಷಿಕೋತ್ಸವಕ್ಕಾಗಿ ನಾವು ಅದನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದ್ದು, ಮತ್ತು ಇತರ ಕೆಲವು ದಿನಾಂಕಗಳನ್ನು ಸಹ ಪರಿಗಣಿಸಲಾಗುತ್ತಿದೆ ಹಾಗೂ ವಾಘ್ ನಖ್ ಅನ್ನು ಹಿಂದಕ್ಕೆ ಸಾಗಿಸುವ ವಿಧಾನಗಳನ್ನು ಸಹ ರೂಪಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.