*  ಲಾಜಿಸ್ಟಿಕ್ ಕಂಪನಿ ಬ್ಲೂ ಡಾರ್ಟ್ ಜತೆ ಇಂಡಿಯಾ ಪೋಸ್ಟ್ ಜೊತೆ ಅಂಚೆ ಇಲಾಖೆ ಮೂಲಕ ಕಳಿಸಲಾಗುವ ಪಾರ್ಸಲ್ ಗಳಿಗೆ ಡಿಜಿಟಲ್ ಪಾರ್ಸಲ್ ಲಾಕರ್ ಅಳವಡಿಸುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ. * ಈ ಡಿಜಿಟಲ್ ಸೇವೆಯನ್ನು ಡಿಜಿಟಲ್ ಪಾರ್ಸಲ್ ಲಾಕರ್‌ಗಳಿಂದ ಸರಕುಗಳನ್ನು ಅಂಚೆ ಇಲಾಖೆ ಮೂಲಕ ಹಿಂಪಡೆಯಲು ಬಳಸಿಕೊಳ್ಳಬಹುದಾಗಿದೆ. * ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬ್ಲೂಡಾರ್ಟ್ ಹಾಗೂ ಇಂಡಿಯಾ ಪೋಸ್ಟ್ ಈ ಒಪ್ಪಂದ ಮಾಡಿಕೊಂಡಿದೆ. * ಇದರ ಮೂಲಕ ಆಯ್ದ ಅಂಚೆ ಕಚೇರಿಗಳಲ್ಲಿ ಸ್ವಯಂಚಾಲಿತ ಡಿಜಿಟಲ್ ಪಾರ್ಸಲ್ ಲಾಕರ್ ಸೌಲಭ್ಯ/ ಪಡೆಯಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚುವರಿ ವಿತರಣಾ ಸೌಲಭ್ಯ ಸಿಗಲಿದೆ ಎಂದು ಕಂಪನಿ ಹೇಳಿದೆ.