* ಕೃತಕ ಬುದ್ದಿಮತ್ತೆಯ ಮುಖ ಎಂದೇ ಪ್ರಖ್ಯಾತರಾಗಿರುವ ತಂತ್ರಜ್ಞ ಸ್ಯಾಮ್‌ ಆಲ್ಟ್‌ಮನ್‌ ಮತ್ತೊಮ್ಮೆ ಓಪನ್‌ ಎಐ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡಿದ್ದಾರೆ.* ಮೈಕ್ರೋಸಾಫ್ಟ್‌ ಓಪನ್‌ ಎಐ ಸಂಸ್ಥೆಯಲ್ಲಿ ಶೇ.49ರಷ್ಟು ಷೇರು ಹೊಂದಿದ್ದು, ಮೈಕ್ರೋಸಾಫ್ಟ್‌ ಸೇರಿದಂತೆ ಎಲ್ಲಾ ಷೇರುದಾರರು ಆಲ್ಟ್‌ಮನ್‌ರನ್ನು ಮರು ನೇಮಕ ಮಾಡುವಂತೆ ನಿರ್ದೇಶಕ ಮಂಡಳಿಯ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. * ಆ ಕಂಪನಿಗೆ ಸ್ಯಾಮ್‌ ಆಲ್ಪ್‌ಮನ್‌ ಅವರು ಸಹಸಂಸ್ಥಾಪಕರಾಗಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಶನಿವಾರ ಇದ್ದಕ್ಕಿದ್ದಂತೆ ವಜಾ ಮಾಡಿದ್ದು, ಟೆಕ್‌ ಉದ್ಯಮವನ್ನು ಆಘಾತಕ್ಕೆ ದೂಡಿತ್ತು.