* 2023ರ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ (Nobel Prize 2023) ಘೋಷಣೆಯಾಗುತ್ತಿದ್ದು, ಫ್ರಾನ್ಸ್‌ನ ಪಿಯರೆ ಅಗೋಸ್ಟಿನಿ, ಹಂಗೇರಿ-ಆಸ್ಟ್ರಿಯಾದ ಫೆರೆಂಕ್ ಕ್ರೌಸ್ಟ್ ಮತ್ತು ಫ್ರಾನ್ಸ್-ಸ್ವೀಡನ್‌ನ ಆನ್ನೆ ಎಲ್’ಹುಲ್ಲಿಯರ್ ಅವರ ಹೆಸರನ್ನು ಘೋಷಿಸಲಾಗಿದೆ.* ವಿಜ್ಞಾನಿಗಳಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಅಕ್ಟೋಬರ್ 3 ರಂದು ಮ್ಯಾಟರ್‌ನಲ್ಲಿ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಅಟೊಸೆಕೆಂಡ್ ಬೆಳಕಿನ ಪಲ್ಸ್‌ಗಳನ್ನು ಉತ್ಪಾದಿಸುವಲ್ಲಿ ಅವರ ಪ್ರವರ್ತಕ ಕೆಲಸಕ್ಕಾಗಿ ಈ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.* 2022 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಫ್ರಾನ್ಸ್‌ನ ಅಲೈನ್ ಆಸ್ಪೆಕ್ಟ್, ಯುನೈಟೆಡ್ ಸ್ಟೇಟ್ಸ್‌ನ ಜಾನ್ ಕ್ಲೌಸರ್ ಹಾಗೂ ಆಸ್ಟ್ರಿಯಾದ ಆಂಟನ್ ಝೈಲಿಂಗರ್ ಅವರು ಹಂಚಿಕೊಂಡಿದ್ದಾರೆ.* ಈ ಪ್ರಶಸ್ತಿಯ ಮೊತ್ತ 10 ಲಕ್ಷ ಡಾಲರ್‌ ಒಳಗೊಂಡಿದ್ದು, ಈ ಪ್ರಶಸ್ತಿಯನ್ನು ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್, "ಕ್ವಾಂಟಮ್ ಮಾಹಿತಿ ವಿಜ್ಞಾನದ ಪ್ರವರ್ತಕ" ಕ್ಕಾಗಿ ಮೂವರು ವಿಜ್ಞಾನಿಗಳನ್ನು ಉಲ್ಲೇಖಿಸಿದೆ.* ಅವರು ಅಟೊಸೆಕೆಂಡ್ ಬೆಳಕಿನ ಪಲ್ಸ್‌ಗಳನ್ನು ಉತ್ಪಾದಿಸುವಲ್ಲಿ ಅವರ ಪ್ರವರ್ತಕ ಕೆಲಸಕ್ಕಾಗಿ (For experimental methods that generate attosecond pulses of light for the study of electron dynamics in matter) ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ.* ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್'ಹುಲ್ಲಿಯರ್ ಅವರು ಎಲೆಕ್ಟ್ರಾನ್‌ಗಳ ತ್ವರಿತ ಚಲನೆಯನ್ನು ಸೆರೆಹಿಡಿಯಲು ಬೆಳಕಿನ ಅತಿ ವೇಗದ ಸ್ಫೋಟಗಳನ್ನು ಮಾಡಿದರು.* "ಅನಿ ಎಲ್'ಹುಲ್ಲಿಯರ್ ಅವರು ಅನಿಲದಲ್ಲಿನ ಪರಮಾಣುಗಳೊಂದಿಗೆ ಲೇಸರ್ ಬೆಳಕಿನ ಪರಸ್ಪರ ಕ್ರಿಯೆಯಿಂದ ಹೊಸ ಪರಿಣಾಮವನ್ನು ಕಂಡುಹಿಡಿದರು. (ಅನಿಲದ ಮೂಲಕ ಅತಿಗೆಂಪು ಲೇಸರ್ ಬೆಳಕನ್ನು ಹರಡಿದಾಗ ಬೆಳಕಿನ ಹಲವು ವಿಭಿನ್ನ ಮೇಲ್ಪದರಗಳು ಉದ್ಭವಿಸಿದವು ಎಂದು ಕಂಡುಹಿಡಿದರು.)* "ಪಿಯರೆ ಅಗೊಸ್ಟಿನಿ" ಮತ್ತು "ಫೆರೆಂಕ್ ಕ್ರೌಸ್ಜ್" ಅವರು ಈ ಪರಿಣಾಮವನ್ನು ಹಿಂದೆ ಸಾಧ್ಯವಿದ್ದಕ್ಕಿಂತ ಕಡಿಮೆ ಬೆಳಕಿನ ಪಲ್ಸ್ ರಚಿಸಲು ಬಳಸಬಹುದು ಎಂದು ಪ್ರದರ್ಶಿಸಿದರು," ನೊಬೆಲ್ ಸಮಿತಿಯು ತಿಳಿಸಿದೆ.