* ಭಾರತದ ಹೊರಗೆ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಅತಿದೊಡ್ಡ ಪ್ರತಿಮೆಯನ್ನು ಅಕ್ಟೋಬರ್ 14 ರಂದು ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಅನಾವರಣಗೊಳ್ಳಲಿದೆ. * ಬಿ.ಆರ್.ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಗೆ "ಸಮಾನತೆಯ ಪ್ರತಿಮೆ" ಎಂದು ಹೆಸರಿಡಲಾಗಿದ್ದು, ಈ ಪ್ರತಿಮೆಯನ್ನು ಖ್ಯಾತ ಶಿಲ್ಪಿ, ಪದ್ಮ ಪ್ರಶಸ್ತಿ ಪುರಸ್ಕೃತ ರಾಮ್ ವಾಂಚಿ ಸುತಾರ್ ಅವರು ನಿರ್ಮಿಸಿದ್ದಾರೆ.* ಸುತಾರ್‌ ಅವರು ಗುಜರಾತ್ ನ ಅಹಮದಾಬಾದ್ ನಲ್ಲಿ ಇರುವ ಅತೀ ಎತ್ತರದ ಸರ್ದಾರ್ ವಲ್ಲಭ ಭಾಯಿ ಪಟೇಲ್‌ ಅವರ ಪ್ರತಿಮೆಯನ್ನು ಕೂಡಾ ರಾಮ್ ವಾಂಚಿ ಸುತಾರ್ ಅವರು ನಿರ್ಮಿಸಿದ್ದಾರೆ.* ಭಾರತದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಅಂಬೇಡ್ಕರ್ ಇಂಟರ್ ನ್ಯಾನಲ್ ಸೆಂಟೆಡ್ ಸುಮಾರು 13 ಎಕರೆ ಸ್ಥಳದಲ್ಲಿ ಪ್ರತಿಮೆಯನ್ನು ನಿರ್ಮಿಸಿರುವುದಾಗಿ ವರದಿ ತಿಳಿಸಿದೆ.* ಭಾರತದ ಹೊರಗೆ ಅಂದರೆ ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ನಿರ್ಮಾಣಗೊಂಡ ಅತೀ ದೊಡ್ಡ ಪ್ರತಿಮೆ ಇದಾಗಿದ್ದು, ಅಂಬೇಡ್ಕರ್ ಅವರ ನೆನಪಿಗಾಗಿ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದಾಗಿ ತಿಳಿಸಿದೆ.* ಇತ್ತೀಚಿಗೆ ಹೈದರಾಬಾದ್ ನಲ್ಲಿ ಅನಾವರಣಗೊಂಡ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯು ವಿಶ್ವದಲ್ಲಿಯೇ ಅತಿ ಎತ್ತರದ್ದಾಗಿದ್ದೆ ಎಂದು ತಿಳಿಸಿದೆ.