* ಭಾರತೀಯ ನೌಕಾಪಡೆ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (ಜಿಆರ್‌ಎಸ್‌ಇ) ನಿರ್ಮಿಸಿದ ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗು ವಾಟರ್‌ಕ್ರಾಫ್ಟ್ ಹಡಗನ್ನು ಕಟ್ಟುಪಲ್ಲಿ ಬಂದರಿನ ಲಾರ್ಸನ್ ಮತ್ತು ಟೂಬ್ರೊದಲ್ಲಿ ಅನವರಣ ಮಾಡಲಾಯಿತು. ಇದಕ್ಕೆ ಕರ್ನಾಟಕದ ಅಂಜದೀಪ್ ದ್ವೀಪದ ಹೆಸರನ್ನು ಇಡಲಾಗಿದೆ, * ಏಪ್ರಿಲ್ 2019ರಲ್ಲಿ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್, ರಕ್ಷಣಾ ಸಚಿವಾಲಯದ ನಡುವೆ ನಡೆದ ಯೋಜನೆಯ ಒಪ್ಪಂದದ ಎಂಟು ಹಡಗುಗಳಲ್ಲಿ ಇದು ಮೂರನೆಯದು ಎಂದು ಹೇಳಲಾಗಿದೆ.* GRSE ನಿರ್ಮಿಸಿದ ‘ಅರ್ನಾಲಾ’ ಹಡಗುಗಳು ಪ್ರಸ್ತುತ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ವಾರ್‌ಫೇರ್ ಕಾರ್ವೆಟ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಕರಾವಳಿಯ ಸಮುದ್ರದಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳು, ಕಡಿಮೆ ತೀವ್ರತೆಯ ಕಡಲ ಕಾರ್ಯಾಚರಣೆಗಳು, ಇತರ ಮೇಲ್ಮೈ ಕಣ್ಗಾವಲುಗಳನ್ನು ಕೈಗೊಳ್ಳಲು ಈ ಹಡಗುಗಳನ್ನು ವಿನ್ಯಾಸಗೊಳಿಸಲಾಗಿದೆ.