* ಇಸ್ರೋ ಕಳುಹಿಸಿದ್ದ ಚಂದ್ರಯಾನ -3 ನೌಕೆಯು ಲ್ಯಾಂಡರ್ ಚಂದ್ರನ ದಕ್ಷಿಣ ದ್ರುವದ ಅಂಗಳದಲ್ಲಿ ಆಗಸ್ಟ್ 23 ರಂದು ಸಂಜೆ 6 ಗಂಟೆ 04 ನಿಮಿಷಕ್ಕೆ ಯಶಸ್ವಿಯಾಗಿ ತಲುಪಿದೆ.* ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರೂ 1962ರಲ್ಲಿ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಿದರು.* ಭಾರತೀಯ ಸರಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿದ್ದ ಸಂಸ್ಥೆಯಲ್ಲಿ ಡಾ.ವಿಕ್ರಮ್ ಸಾರಾಭಾಯ್ ಅವರು ಮೊದಲ ಅಧ್ಯಕ್ಷರಾಗಿದ್ದು, 1969ರಲ್ಲಿ ಅದೇ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಎಂದು ಮಾರ್ಪಟ್ಟಿತು.* ಭಾರತೀಯ ಬಾಹ್ಯಾಕಾಶದ ಪಿತಾಮಹ ಎಂದೇ ಹೆಸರುವಾಸಿಯಾಗಿರುವ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಕೇರಳದ ತಿರುವನಂತಪುರಂನಲ್ಲಿ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ಸ್ಥಾಪಿಸಲಾಗಿದೆ. * ಇಸ್ರೋ ಸ್ಥಾಪನೆಯಾದಾಗಿಂದ 11 ಅಧ್ಯಕ್ಷರನ್ನು ಹೊಂದಿದ್ದು, ಪ್ರಸ್ತುತ ಎಸ್. ಸೋಮನಾಥ ಅವರು ISRO ಅಧ್ಯಕ್ಷರಾಗಿದ್ದಾರೆ.* ವಿಶ್ವದ ಟಾಪ ಹತ್ತು ಬಾಹ್ಯಾಕಾಶಗಳಲ್ಲಿ ರಷ್ಯಾದ ಫೆಡರಲ್ ಸ್ಪೇಸ್ ಏಜೆನ್ಸಿ ಬಾಹ್ಯಾಕಾಶ ಪ್ರಥಮ ಸ್ಥಾನದಲ್ಲಿದ್ದರೆ. ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಎರಡನೇ ಸ್ಥಾನದಲ್ಲಿದೆ.- ಕಾರ್ಯಸಾಧನೆಗಳು* 1979ರಲ್ಲಿ ಭಾಸ್ಕರ-1, ಭೂಮಿಯ ವೀಕ್ಷಣೆಗೆ ಪ್ರಾಯೋಗಿಕ ಉಪಗ್ರಹ ಉಡಾವಣೆ.* 1984ರಲ್ಲಿ ರಷ್ಯಾದ ರಾಕೆಟ್ ಸೋಯುಜ್ ಟಿ-11ರ ಮೂಲಕ ಬಾಹ್ಯಾಕಾಶಕ್ಕೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ.* 2001 ರಲ್ಲಿ -1 ಉಪಗ್ರಹದೊಂದಿಗೆ ಭಾರಿ ರಾಕೆಟ್ ಜಿಯೊಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯಶಸ್ವಿ ಉಡಾವಣೆ. * 2002ರಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಕಲ್ಪನಾ-1 ಉಪಗ್ರಹ ಉಡಾವಣೆ.* 2008ರಲ್ಲಿ ಪಿಎಸ್‌ಎಲ್ ವಿಯಿಂದ ಇಸ್ರೇಲಿ ಉಪಗ್ರಹ ಟೆಕ್ಸಾರ್ ಉಡಾವಣೆ, ಒಂದೇ ಪಿಎಸ್‌ಎಲ್‌ವಿ ಮೂಲಕ ಎರಡು ಭಾರತೀಯ ಮತ್ತು ಎಂಟು ವಿದೇಶಿ ಉಪಗ್ರಹ ಸೇರಿ ಒಟ್ಟು 10 ಉಪಗ್ರಹಗಳ ಉಡಾವಣೆ.* ಭಾರತದಿಂದ ಮೊದಲ ಬಾರಿ ಪಿಎಸ್‌ಎಲ್‌ವಿ ಮೂಲಕ ಚಂದ್ರಯಾನ-1 ಉಡಾವಣೆ, 2019ರಲ್ಲಿ ಏರಿಯಾನೆ, ಎಮಿಸ್ಯಾಟ್ ಮತ್ತು ರಿಸ್ಯಾಟ್ -2 ಬಿ, ಚಂದ್ರಯಾನ-2 ಯೋಜನೆಯನ್ನು ಇನ್ನೂ ಕೈಗೊಂಡಿದೆ. 2013ರಲ್ಲಿ ಮಂಗಳಯಾನ ಯೋಜನೆಯನ್ನೂ ಯಶಸ್ವಿಗೊಳಿಸಿದೆ.* ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಶ್ರೀ ಹರಿಕೋಟಾದಿಂದ 87 ಭಾರತೀಯ 8 ವಿದ್ಯಾರ್ಥಿ ಉಪಗ್ರಹಗಳು (ವಿದ್ಯಾರ್ಥಿಗಳ ಸಂಶೋಧನಾ ಉಪಗ್ರಹಗಳು), 23 ವಿವಿಧ ದೇಶಗಳ 180 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.