* ಅಝರ್ಬೈಜಾನ್ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತದ ಆರ್‌ ಪ್ರಜ್ಞಾನಂದ ವಿರುದ್ಧ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿಶ್ವಕಪ್ ಗೆದ್ದುಕೊಂಡಿದ್ದಾರೆ.* 2023ರ ಚೆಸ್ ವಿಶ್ವಕಪ್ ನಲ್ಲಿ ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಭಾರತದ ಆರ್. ಪ್ರಜ್ಞಾನಂದ ರನ್ನರ್ಅಪ್ ಆಗಿ ಹೊರಹೊಮ್ಮಿದರು. ಪಂದ್ಯಗಳು ಡ್ರಾ ಆಗಿದ್ದ ಕಾರಣ ಟೈ ಬ್ರೇಕ್ ಮೂಲಕ ವಿಜೇತರನ್ನು ನಿರ್ಧರಿಸಲಾಗಿದೆ.* ಸದ್ಯ ರನ್ನರ್ಅಪ್ ಆಗಿ ಹೊರಹೊಮ್ಮಿರುವ ಭಾರತದ ಆರ್. ಪ್ರಜ್ಞಾನಂದ ಅವರಿಗೆ 80 ಸಾವಿರ ಅಮೆರಿಕ ಡಾಲರ್ ಅಂದರೆ, ಅಂದಾಜು 66.13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ವಿಶ್ವಕಪ್ ಗೆದ್ದ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರು 110 ಸಾವಿರ ಡಾಲರ್ (ಅಂದಾಜು 90.90 ಲಕ್ಷ ರೂಪಾಯಿ) ಪಡೆದುಕೊಂಡಿದ್ದಾರೆ.*  ಚೆಸ್ನಲ್ಲಿ ನಾನಿನ್ನೂ ಸಾಕಷ್ಟು ಸುಧಾರಣೆ ಕಾಣಬೇಕಿದೆ ಎಂದು ಗ್ರಾಂಡ್ ಮಾಸ್ಟರ್ ಪ್ರಜ್ಞಾನಂದ ತಮ್ಮನ್ನು ತಾವು ವಿಶ್ಲೇಷಣೆ ಮಾಡಿಕೊಂಡಿದ್ದಾರೆ.