* ಭಾರತದ ಟಾಟಾ ಸಮೂಹವು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.* ಆ್ಯಪಲ್ ಇಂಕ್ನ (Apple Inc) ಐಫೋನ್ ಅನ್ನು ಬೆಂಗಳೂರಿನಲ್ಲಿ (Bangalore) ತಯಾರಿಸುವ ತೈವಾನ್ನ ತೈಪೆಯಿಯ (Taipei) ವಿಸ್ಟ್ರಾನ್ (Wistron Corp) ಕಂಪನಿಯ ಘಟಕವನ್ನು ಖರೀದಿಸಲು ಟಾಟಾ ಸಮೂಹ (Tata Group) ಒಪ್ಪಂದ ಮಾಡಿಕೊಂಡಿದೆ. * ವಿವಿಧ ಸಹಭಾಗಿತ್ವ ಯೋಜನೆಗಳ ಬಗ್ಗೆ ಎರಡೂ ಕಂಪನಿಗಳು ಸಮಾಲೋಚನೆ ನಡೆಸಿವೆ. ಅದರಂತೆ, ವಿಸ್ಟ್ರಾನ್ನ ಬೆಂಗಳೂರು ಘಟಕದ ಹೆಚ್ಚು ಪಾಲನ್ನು ವಹಿಸಿಕೊಳ್ಳುವ ಬಗ್ಗೆ ಟಾಟಾ ಸಮೂಹ ಒಲವು ವ್ಯಕ್ತಪಡಿಸಿದೆ. ವಿಸ್ಟ್ರಾನ್ ಬೆಂಬಲದೊಂದಿಗೆ ಉತ್ಪಾದನೆ ಕಾರ್ಯಾಚರಣೆ ಆರಂಭಿಸಲು ಟಾಟಾ ಉತ್ಸುಕವಾಗಿದೆ ಎಂದು ಮೂಲಗಳು ಹೇಳಿವೆ.