* ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರನ್ನು 2026 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆ (International IDEA) ಯ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಮಹತ್ವದ ಘೋಷಣೆಯನ್ನು ಭಾರತದ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.* ಡಿಸೆಂಬರ್ 3, 2026 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ IDEA ಸದಸ್ಯ ರಾಷ್ಟ್ರಗಳ ಮಂಡಳಿ ಸಭೆಯಲ್ಲಿ ಅವರು ಅಧಿಕೃತವಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ.* International IDEA ಒಂದು ಜಾಗತಿಕ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಸ್ಥಿರ, ಪಾರದರ್ಶಕ ಮತ್ತು ಒಳಗೊಳ್ಳುವಂತ ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಗುರಿ ಹೊಂದಿದೆ. ಈ ಸಂಸ್ಥೆಗೆ ಪ್ರಸ್ತುತ 35 ಸದಸ್ಯ ರಾಷ್ಟ್ರಗಳ ಸದಸ್ಯತ್ವವಿದೆ ಅಮೆರಿಕಾ ಮತ್ತು ಜಪಾನ್ ವೀಕ್ಷಕ ರಾಷ್ಟ್ರಗಳಾಗಿವೆ.* ಭಾರತವು International IDEA ಯ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಹಲವು ವರ್ಷಗಳಿಂದ ಈ ಜಾಗತಿಕ ಸಂಸ್ಥೆಯ ಆಡಳಿತ ಮತ್ತು ಪ್ರಜಾಪ್ರಭುತ್ವ ಸಂವಾದಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ.ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆ: ಭಾರತವನ್ನು ಜಾಗತಿಕ ಚುನಾವಣಾ ಸುಧಾರಣೆಗಳಲ್ಲಿ ಪ್ರಮುಖ ನಾಯಕತ್ವದಲ್ಲಿ ನಿಲ್ಲಿಸುತ್ತದೆ. ಭಾರತೀಯ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ತಂತ್ರಜ್ಞಾನ ಬಳಕೆಯ ಯಶಸ್ಸನ್ನು ಜಾಗತಿಕ ವೇದಿಕೆಯಲ್ಲಿ ಹಂಚಲು ಅವಕಾಶವನ್ನು  ಒದಗಿಸುತ್ತದೆ ಹಾಗೂ ವಿಶ್ವದ ಚುನಾವಣಾ ಚಟುವಟಿಕೆಗಳಲ್ಲಿ ಭಾರತ–ಕೇಂದ್ರಿತ ತಜ್ಞತೆಯನ್ನು ಹೆಚ್ಚಿಸುತ್ತದೆ.