Job Description: * ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಭಾರತದ ಸೇನಾ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ.ಈಗ ಮೂರೂ ರಕ್ಷಣಾ ಪಡೆಗಳಾದ ಭೂಸೇನೆ,ನೌಕಾಸೇನೆ,ಮತ್ತು ವಾಯುಸೇನೆ ಪಡೆಗಳ ಯುದ್ಧ ಸನ್ನದ್ಧತೆಯ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. *ಸೇನಾ ಪಡೆಗಳ ಯುದ್ಧ ಸಾಮರ್ಥ್ಯಗಳನ್ನೂ ಹೆಚ್ಚಿಸಲು 79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂಮಿಲಿಟರಿ ಹಾರ್ಡ್ ವೇರಗಳ ಖರೀದಿ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ.ರಕ್ಷಣಾ ಸಚಿವ ರಾಜನಾಥ ಸಿಂಗ ಅವರ ಅದ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾದೀನ ಮಂಡಳಿ ಮಂಡಳಿ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.* ರಕ್ಷಣಾ ಸಚಿವ ರಾಜನಾಥ ಸಿಂಗ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾದೀನ ಮಂಡಳಿ ಸಭೆಯು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.* "ಆಪರೇಷನ್ ಸಿಂಧೂರ" ನಡೆದ ನಂತರ ಶಸ್ತ್ರಾಸ್ತ್ರಗಳ ಖರೀದಿಗೆ ಸಂಭದಿಸಿದ ಎರಡನೇ ನಿರ್ಧಾರ ಇದಾಗಿದೆ.ಆಗಸ್ಟ್ 5 ರಂದು 67 ಸಾವಿರ ಕೋಟಿ ಮೌಲ್ಯದ ಖರೀದಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು.* ನಾಗ ಕ್ಷಿಪಣಿಗಳು,ಮೂರೂ ಸಶಸ್ತ್ರ ಪಡೆಗಳು ಬಳಸಬಹುದಾದ ಯುದ್ಧ ಹಡಗುಗಳು ಮತ್ತು ಎಲೆಕ್ಟ್ರಾನಿಕ ಗುಪ್ತಚರ ಹಾಗೂ ಕಣ್ಣಾಗಾವಲು ವ್ಯವಸ್ಥೆಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಸೇನಾ ಹಾರ್ಡ್ವೇರಗಳು ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.* ಭಾರತೀಯ ನೌಕಾಪಡೆಯು ಸೇನೆ ಮತ್ತು ವಾಯುಪಡೆಯೊಂದಿಗೆ ಜಂಟಿ ದಾಳಿ ಕಾರ್ಯಾಚರಣೆಯನ್ನು ನಡೆಸಲು,ಲ್ಯಾಂಡಿಂಗ್ ಫ್ಲಾಟ್ ಫಾರ್ಮ್ ಡಾಕ್ ಗಳು ತುಂಬಾ ಸಹಾಯಕಾರಿಯಾಗಲಿವೆ.* ಎನ್ಎಎಂ ಐಎಸ್ ವ್ಯವಸ್ಥೆಯು ಶತ್ರು ಪಾಳಯದ ಯುದ್ಧ ವಾಹನಗಳು,ಬಂಕರಗಳು,ಮತ್ತು ಇತರೆ ವ್ಯವಸ್ಥೆಗಳನ್ನು ನಾಶಪಡಿಸಲು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.* ಭಾರತೀಯ ವಾಯುಪಡೆಗೆ ಧೀರ್ಘ ಶ್ರೇಣಿಯ ದಾಳಿ ಸಾಮರ್ಥ್ಯದ ಹಲವು ಶಸ್ತ್ರಾಸ್ತ್ರಗಳ ಖರೀದಿ ಪ್ರಸ್ತಾವನೆಗೂ ಡಿಎಸಿ ಒಪ್ಪಿಗೆ ಸೂಚಿಸಿದೆ.* ಭಾರತೀಯ ನೌಕಾಪಡೆಗೆ 76 ಎಂಎಂ ಸೂಪರ್ ರಾಯ್ಪಿಡ ಗನ್ ಮೌಂಟ್ ಗಾಗಿ ಟ್ರ್ಯಾಕ್ ಸಿಸ್ಟಮ್ ಹಾಗೂ ಮದ್ದುಗುಂಡುಗಳನ್ನು ಖರೀದಿಸಲಾಗಿದೆ.