* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ದಿನಗಳ ಫಿಜಿ ಭೇಟಿಯಲ್ಲಿ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫಿಜಿಯ ಅಧ್ಯಕ್ಷ ರತು ವಿಲಿಯಮ್ ಮೈವಲಿಲಿ ಕಟೋನಿವೆರೆ ಅವರು ದ್ರೌಪದಿ ಮುರ್ಮು ಅವರಿಗೆ ‘ಆರ್ಡರ್ ಆಫ್ ಫಿಜಿ’ಯನ್ನು ನೀಡಿ ಗೌರವಿಸಿದರು. * ಇದು ಫಿಜಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಭಾರತದಿಂದ ರಾಷ್ಟ್ರಪತಿಯೊಬ್ಬರು ದ್ವೀಪಸಮೂಹ ರಾಷ್ಟ್ರಕ್ಕೆ ಭೇಟಿ ನೀಡಿರುವುದು ಇದೇ ಮೊದಲು.* ಈ ಗೌರವವು ಭಾರತ ಮತ್ತು ಫಿಜಿ ನಡುವಿನ ಸ್ನೇಹದ ಪ್ರತಿಬಿಂಬವಾಗಿದೆ ಎಂದು ಬಣ್ಣಿಸಿದರು. ಜೊತೆಗೆ ಉಭಯ ದೇಶಗಳ ಬಾಂಧವ್ಯವನ್ನು ಶ್ಲಾಘಿಸಿ ಫಿಜಿಯನ್ನು ಸದೃಢ ರಾಷ್ಟ್ರವಾಗಿಸಲು ಪಾಲುದಾರಿಕೆಗೆ ಭಾರತ ಸಿದ್ಧವಾಗಿದೆ ಎಂದರು. * ಪ್ರಧಾನಿ ನರೇಂದ್ರ ಮೋದಿ ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ 2023 ರಲ್ಲಿ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸಹ ನೀಡಲಾಯಿತು.