* ಸರ್ಕಾರದ ಒಪ್ಪಿಗೆ ಇಲ್ಲದೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಮಹಾನಗರ ಪಾಲಿಕೆಗೆ (MCD) ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಹೊಂದಿರುವುದಾಗಿ ಸುಪ್ರೀಂಕೋರ್ಟ್ ಆಗಸ್ಟ್ 05ರಂದು  ಸ್ಪಷ್ಟಪಡಿಸಿದ್ದು, ಇದರೊಂದಿಗೆ ಆಡಳಿತರೂಢ ಆಮ್ ಆದ್ಮ ಪಕ್ಷಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.* ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ದೆಹಲಿ ಮಹಾನಗರ ಪಾಲಿಕೆಯ ಕಾಯ್ದೆ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಈ ಅಧಿಕಾರವನ್ನು ಹೊಂದಿದ್ದಾರೆ. ಕಾಯ್ದೆ ಅನ್ವಯ ಗವರ್ನರ್ ಅವರ ಅಧಿಕಾರವನ್ನು ಪ್ರಶ್ನಿಸಿ ದೆಹಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು.* ಕಾನೂನಿನ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಅವರು ಅಧಿಕಾರವನ್ನು ಬಳಸುವುದು ಅವರ ವಿವೇಚನೆಗೆ ಬಿಟ್ಟಿದ್ದು, ಇದು ಕಲಂ 239ರ ಅಡಿ ವಿನಾಯ್ತಿ ಹೊಂದಿದೆ. 1993ರ ತಿದ್ದುಪಡಿ ತಂದ  ವೇಳೆ ದೆಹಲಿ ಮಹಾನಗರ ಪಾಲಿಕೆ ಕಾಯ್ದೆಯಲ್ಲಿ ಸದಸ್ಯರ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್ ಗೆ ನೀಡಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.* ಸುಪ್ರೀಂಕೋರ್ಟ್ ಸಿಜೆಐ ಚಂದ್ರಚೂಡ್, ಜಸ್ಟೀಸ್ ಪಿಎಸ್ ನರಸಿಂಹ, ಜಸ್ಟೀಸ್ ಜೆಬಿ ಪರ್ಡಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು 2023ರ ಮೇ 17ರಂದು ತೀರ್ಪನ್ನು ಕಾಯ್ದಿರಿಸಿತ್ತು. ದೆಹಲಿ ಸರ್ಕಾರದ ಸಲಹೆ ಪಡೆಯದೇ ಅಂದಿನ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಷೇನಾ ಅವರು ದೆಹಲಿ ಮಹಾನಗರ ಪಾಲಿಕೆಗೆ ಸದಸ್ಯರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.