* 2024-25ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ತಿಳಿಸಿದೆ.* ದೇಶದ ಕೃಷಿ ಇಳುವರಿ ಹೆಚ್ಚಳವಾಗಲಿದೆ. ಕೇಂದ್ರ ಸರಕಾರ ಸಾರ್ವಜನಿಕ ವೆಚ್ಚದ ಪ್ರಮಾಣವನ್ನು ಏರಿಸಿದೆ. ಇದು ಆರ್ಥಿಕ ಚಟುವಟಿಕೆಗಳಿಗೆ ಬಲ ನೀಡಲಿದೆ ಎಂದು ಬುಧವಾರ ಬಿಡುಗಡೆ ಮಾಡಿರುವ ಆರ್ಥಿಕ ಮುನ್ನೋಟದ ವರದಿ ತಿಳಿಸಿದೆ.* ಇದಕ್ಕೂ ಮುಂಚೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಜಿಡಿಪಿಯನ್ನು ಶೇ. 7.2 ಎಂದು ಅಂದಾಜಿಸಿತ್ತು. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ. ಸ್ಥಿರ ಬೆಳವಣಿಗೆ ಸಾಧಿಸುತ್ತಿದೆ ಎಂದು ಎಡಿಬಿಯಾ ಭಾರತದ ನಿರ್ದೇಶಕ ಮಿಯೋ ಓಕಾ ತಿಳಿಸಿದ್ದಾರೆ.* ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಭಾರತದ ಜಿಡಿಪಿ ಶೇ. 6.8ರಷ್ಟು ಬೆಳೆಯಬಹುದು ಎಂದು ಈ ಹಿಂದೆ ಮಾಡಿದ್ದ ಅಂದಾಜನ್ನು ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಈಗಲೂ ಪುನರುಚ್ಚರಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ (2025-26) ಜಿಡಿಪಿ ಶೇ. 6.9ರಷ್ಟು ಹೆಚ್ಚಬಹುದು ಎಂದು ಅಂದಾಜು ಮಾಡಿದೆ.* ಮೇಕ್ ಇನ್ ಇಂಡಿಯಾದೊಂದಿಗೆ ಉತ್ಪಾದನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರುವ ಯೋಜನೆ ದೇಶೀಯ ಉತ್ಪಾದನಾ ವಲಯವನ್ನು ಉತ್ತೇಜಿಸಲು ಮತ್ತು ದೇಶಕ್ಕೆ ಹೂಡಿಕೆಯನ್ನು ಹೆಚ್ಚಿಸಲು 2014 ರಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮ ಜಾರಿಗೊಳಿಸಲಿದೆ.* ಈ ಉಪಕ್ರಮವು ದೇಶದ ಜಿಡಿಪಿಗೆ ಉತ್ಪಾದನಾ ವಲಯದ ಕೊಡುಗೆಯನ್ನು ಹೆಚ್ಚಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ರಫ್ತುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.