* ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ನಲ್ಲಿ ಅನುಮತಿ ನೀಡಲಾಗಿದೆ. ವಿವಾಹ ಸಮಾನತೆಯ ಮಸೂದೆಯನ್ನು ಥೈ ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿದ್ದು, ಸಲಿಂಗ ದಂಪತಿಗಳು ಕಾನೂನುಬದ್ಧವಾಗಿ ವಿವಾಹವಾಗಲು ಅವಕಾಶ ಮಾಡಿಕೊಡಲಾಗಿದೆ.* ತೈವಾನ್‌ ಮತ್ತು ನೇಪಾಳದ ನಂತರ ಸಲಿಂಗ ವಿವಾಹವನ್ನು ಅನುಮತಿಸಲು ಥೈಲ್ಯಾಂಡ್‌ ಏಷ್ಯಾದಲ್ಲಿ ಮೂರನೇ ಸ್ಥಾನವನ್ನು ಪಡೆಯುತ್ತದೆ.* ಮೂರು ತಿಂಗಳ ಹಿಂದೆ ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ ಮಹಾ ವಜಿರಾಲಾಂಗ್‌ಕಾರ್ನ್ (Maha Vajiralongkorn) ಅವರು ಅನುಮೋದಿಸಿದ ನಂತರ ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸಿದ ಆಗ್ನೇಯ ಏಷ್ಯಾದಲ್ಲಿ ಥಾಯ್ಲೆಂಡ್ ಮೊದಲ ರಾಷ್ಟ್ರವಾಗಿದೆ.* ಇದು 120 ದಿನಗಳಲ್ಲಿ ಜಾರಿಗೆ ಬರಲಿದ್ದು, LGBTQ ಜೋಡಿಗಳು ತಮ್ಮ ವಿವಾಹವನ್ನು ಜನವರಿ 22, 2025  ರಿಂದ ನೋಂದಾಯಿಸಲು ಅನುವು ಮಾಡಿಕೊಡುತ್ತದೆ.