* ಭಾರತೀಯ ಬ್ಯಾಡ್ಮಿಂಟನ್ ಅನುಭವಿ ಅಶ್ವಿನಿ ಪೊನ್ನಪ್ಪ ಜುಲೈ 30, 2024 ರಂದು ಪ್ಯಾರಿಸ್ ಕ್ರೀಡಾಕೂಟದಲ್ಲಿ ತಮ್ಮ ಒಲಿಂಪಿಕ್ ವೃತ್ತಿಜೀವನಕ್ಕೆ ಭಾವನಾತ್ಮಕ ವಿದಾಯ ಹೇಳಿದರು. ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಅವರು ಮತ್ತು ಅವರ ಜೊತೆಗಾರ್ತಿ ತನಿಶಾ ಕ್ರಾಸ್ಟೊ ಸತತ ಮೂರನೇ ಸೋಲನ್ನು ಎದುರಿಸಿದ ನಂತರ ಈ ಪ್ರಕಟಣೆ ಹೊರಬಿದ್ದಿದೆ.* 34 ವರ್ಷ ವಯಸ್ಸಿನ ಅಶ್ವಿನಿ ಅವರ ಮೂರನೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಈ ಜಾಗತಿಕ ಕ್ರೀಡಾಕೂಟಗಳ ಮೂಲಕ ಅವರ ಪ್ರಯಾಣವು ಕ್ರೀಡೆಯಲ್ಲಿ ಅವರ ಸಹಿಷ್ಣುತೆ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗಿದೆ.* ಅಶ್ವಿನಿಯ ಜ್ವಾಲಾ ಗುಟ್ಟಾ ಅವರೊಂದಿಗಿನ  ಜೊತೆಯಾಟದಲ್ಲಿ 2010ರ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ಉಬರ್ ಕಪ್‌ನಲ್ಲಿ ಕಂಚಿನ ಪದಕಗಳು (2014 ಮತ್ತು 2016) ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು (2014) ಪದಕಗಳನ್ನು ಪಡೆದುಕೊಂಡಿದ್ದಾರೆ.* 2011 ರಲ್ಲಿ ಅಶ್ವಿನಿ ಮತ್ತು ಜ್ವಾಲಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ(ಕಂಚು) ಗೆದ್ದ ಮೊದಲ ಭಾರತೀಯ ಜೋಡಿ ಎಂದು ಇತಿಹಾಸವನ್ನು ನಿರ್ಮಿಸಿದರು.