* ಇರಾನ್‌ನ ಇಸ್ಫಹಾನ್‌ನಲ್ಲಿ ಜುಲೈ 21 ಮತ್ತು ಜುಲೈ 29 ರ ನಡುವೆ ನಡೆದ 54 ನೇ ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್ (IPhO) 2024 ರಲ್ಲಿ ಭಾರತೀಯ ವಿದ್ಯಾರ್ಥಿಗಳು ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ.* ಜುಲೈ 21 ರಿಂದ 30 ರವರೆಗೆ ಸೌದಿ ಅರೇಬಿಯಾದ ರಿಯಾಡ್‌ನಲ್ಲಿ ನಡೆದ 56 ನೇ ಅಂತರರಾಷ್ಟ್ರೀಯ ರಸಾಯನಶಾಸ್ತ್ರ ಒಲಂಪಿಯಾಡ್‌ನಲ್ಲಿ(IChO2024), ಭಾರತ ತಂಡವು ತಲಾ ಒಂದು ಚಿನ್ನ ಮತ್ತು ಕಂಚು ಮತ್ತು ಎರಡು ಬೆಳ್ಳಿ ಪದಕಗಳನ್ನು ಗಳಿಸಿತು.* ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತವು ವಿಯೆಟ್ನಾಂನೊಂದಿಗೆ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದೆ.ಚೀನಾ ಅಗ್ರಸ್ಥಾನ ಪಡೆದರೆ, ರಷ್ಯಾ ಮತ್ತು ರೊಮೇನಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಈ ಬಾರಿಯ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ ನಲ್ಲಿ 43 ದೇಶಗಳಿಂದ ಒಟ್ಟು 193 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟಾರೆಯಾಗಿ 18 ಚಿನ್ನ, 35 ಬೆಳ್ಳಿ ಮತ್ತು 53 ಕಂಚಿನ ಪದಕಗಳನ್ನು ನೀಡಲಾಯಿತು.ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಂಪಿಯಾಡ್‌ನಲ್ಲಿ ಪದಕ ವಿಜೇತರು:ರಿದಮ್ ಕೆಡಿಯಾ (ಚಿನ್ನ), ರಾಯಪುರ , ಛತ್ತೀಸ್‌ಗಢವೇದ್ ಲಹೋಟಿ (ಚಿನ್ನ), ಇಂದೋರ್, ಮಧ್ಯಪ್ರದೇಶಆಕರ್ಷ್ ರಾಜ್ ಸಹಾಯ (ಬೆಳ್ಳಿ), ನಾಗ್ಪುರ, ಮಹಾರಾಷ್ಟ್ರಭವ್ಯಾ ತಿವಾರಿ (ಬೆಳ್ಳಿ), ನೋಯ್ಡಾ, ಉತ್ತರ ಪ್ರದೇಶಜೈವೀರ್ ಸಿಂಗ್ (ಬೆಳ್ಳಿ), ಕೋಟಾ, ರಾಜಸ್ಥಾನಅಂತರರಾಷ್ಟ್ರೀಯ ರಸಾಯನಶಾಸ್ತ್ರ ಒಲಂಪಿಯಾಡ್ ಪದಕ ವಿಜೇತರು:ದೇವೇಶ್ (ಚಿನ್ನ), ಜಲಗಾಂವ್, ಮಹಾರಾಷ್ಟ್ರಅವನೀಶ್ (ಬೆಳ್ಳಿ), ಕೋಟ, ರಸಸ್ಥಾನಹರ್ಷಿನ್ (ಬೆಳ್ಳಿ), ಹೈದರಾಬಾದ್ , ತೆಲಂಗಾಣಕಶ್ಯಪ್ (ಕಂಚಿನ), ಮುಂಬೈ , ಮಹಾರಾಷ್ಟ್ರ