* ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿದಿದ್ದು, ದೇಶದ ಆರ್ಥಿಕ ಮೂಲಭೂತ ಅಂಶಗಳು ಉತ್ತಮವಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಏಷ್ಯಾ ಪೆಸಿಫಿಕ್ ಇಲಾಖೆಯ ನಿರ್ದೇಶಕ ಕೃಷ್ಣ ಶ್ರೀನಿವಾಸ್ ಹೇಳಿದ್ದಾರೆ.* ಭಾರತದಲ್ಲಿ 2024-25ರಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇ.7 ಎಂದು ಅಂದಾಜಿಸಲಾಗಿದ್ದು, ಕೆಲವು ಏರಳಿತ ಹೊರತಾಗಿಯೂ ಆಹಾರದ ಬೆಲೆಗಳು ಸಾಮಾನ್ಯವಾದಂತೆ ಹಣದುಬ್ಬರ ಶೇ. 4. 4ಕ್ಕೆ ಇಳಿಯುವ ನಿರೀಕ್ಷೆಯಿದೆ ಎಂದು" ಕೃಷ್ಣ ಶ್ರೀನಿವಾಸನ್ ಅಕ್ಟೋಬರ್ 22 ರಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.* ಚುನಾವಣೆಗಳ ಹೊರತಾಗಿಯೂ, ಹಣಕಾಸಿನ ಬಲವರ್ಧನೆಯಾಗುತ್ತಿದೆ. ಮೀಸಲು ಸ್ಥಾನವು ಬಹಳ ಒಳ್ಳೆಯದು. ಆರ್ಥಿಕತೆಯ ಮೂಲಾಂಶಗಳು ಭಾರತ ಉತ್ತಮ ಸ್ಥಾನದಲ್ಲಿರುವುದನ್ನು ಹೇಳುತ್ತವೆ.* ಚುನಾವಣೆ ನಂತರ ದೇಶದಲ್ಲಿ ಮೂರು ಕ್ಷೇತ್ರಗಳಲ್ಲಿ ಸುಧಾರಣೆಗೆ ಆದ್ಯತೆ ನೀಡಬೇಕು. ಅವುಗಳಲ್ಲಿ ಮೊದಲನೇಯದಾಗಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ 2019-20ರಲ್ಲಿ ಅನುಮೋದನೆಗೊಂಡಿರುವ ಕಾರ್ಮಿಕ ಸಂಹಿತೆ ಜಾರಿಗೊಳಿಸುವುದು ಮುಖ್ಯವಾಗಿದೆ. ಏಕೆಂದರೆ ಅದು ಕಾರ್ಮಿಕರಿಗೆ ರಕ್ಷಣೆ ನೀಡುವುದರೊಂದಿಗೆ ಕಾರ್ಮಿಕ ಮಾರುಕಟ್ಟೆಗಳು ಸಾಮಾಜಿಕವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.* ನಿರುದ್ಯೋಗ ದರವು ಶೇಕಡಾ 4.9 ಕ್ಕೆ ಇಳಿದಿರುವುದನ್ನು ಗಮನಿಸಿದ ಅವರು, ಕಾರ್ಮಿಕ ಬಲದ ಭಾಗವಹಿಸುವಿಕೆ ಮತ್ತು ಉದ್ಯೋಗ ಮತ್ತು ಜನಸಂಖ್ಯೆಯ ಅನುಪಾತವು ಹೆಚ್ಚುತ್ತಿದೆ ಎಂದು ಹೇಳಿದರು.* ದೇಶದ ಕಾರ್ಮಿಕ ಶಕ್ತಿಯಲ್ಲಿ ಮಹಿಳಾ ಭಾಗವಹಿಸುವಿಕೆ ಮತ್ತು ಚಾಲ್ತಿಯಲ್ಲಿರುವ ಯುವ ನಿರುದ್ಯೋಗದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.* ಮಹಿಳೆಯರ ಕಾರ್ಮಿಕ ಬಲದ ಭಾಗವಹಿಸುವಿಕೆ ಕಡಿಮೆ ಭಾಗದಲ್ಲಿದೆ ಮತ್ತು ಯುವಕರ ನಿರುದ್ಯೋಗವು ಸಾಕಷ್ಟು ಹೆಚ್ಚಾಗಿದೆ ಎಂದು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಹಾಗಾಗಿ ಉದ್ಯೋಗಗಳನ್ನು ಸೃಷ್ಟಿಸಲು ಪರಿಸರವನ್ನು ಸುಧಾರಿಸಲು ಒತ್ತು ನೀಡಬೇಕು ಎಂದು ಕೃಷ್ಣ ಶ್ರೀನಿವಾಸನ್ ಅವರು ಹೇಳಿದರು.* ಭಾರತದ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವ ಮಿಶ್ರ ಆರ್ಥಿಕತೆಯಾಗಿದ್ದು , ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಗಮನಾರ್ಹ ಸಾರ್ವಜನಿಕ ವಲಯವನ್ನು ಹೊಂದಿದೆ.ಇದು ನಾಮಮಾತ್ರದ GDP ಯಿಂದ ವಿಶ್ವದ ಐದನೇ-ಅತಿದೊಡ್ಡ ಆರ್ಥಿಕತೆಯಾಗಿದೆ. ಮತ್ತು ಖರೀದಿ ಸಾಮರ್ಥ್ಯದ ಸಮಾನತೆ (PPP) ಮೂಲಕ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ.