* ದಕ್ಷಿಣ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಶುಗಳ ಜನನ ದರ ಕುಸಿಯುತ್ತಿದ್ದು, ಇದು ಜನಸಂಖ್ಯೆ, ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ.* ಇತ್ತೀಚೆಗೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಮ್ ಎಂ.ಕೆ. ಸ್ಟಾಲಿನ್ ತಮ್ಮ ರಾಜ್ಯಗಳಲ್ಲಿ ಶಿಶುಗಳ ಜನನ ಪ್ರಮಾಣ ಕುಸಿಯುವ ಬಗ್ಗೆ ಮಾತನಾಡಿದ್ದರು. ಕುಟುಂಬಗಳು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕೆಂದು ತಮ್ಮ ರಾಜ್ಯದ ಜನರಿಗೆ ಕರೆ ನೀಡಿದ್ದರು.* ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಜನನ ದರದಲ್ಲಿ ರಾಷ್ಟ್ರೀಯ ಸರಾಸರಿ ಶೇಕಡಾ 2.1 ಕ್ಕಿಂತ ಕಡಿಮೆ ದರ ಹೊಂದಿದೆ. ತಮಿಳುನಾಡು ಶೇಕಡಾ 1.4 ಕ್ಕೆ ಕಡಿಮೆ, ಆಂಧ್ರಪ್ರದೇಶ (AP), ತೆಲಂಗಾಣ ಮತ್ತು ಕೇರಳದಲ್ಲಿ ಕ್ರಮವಾಗಿ 1.5 ಮತ್ತು ಕರ್ನಾಟಕದಲ್ಲಿ 1.6 ಇದೆ.* ಈ ರಾಜ್ಯಗಳ ಜನಸಂಖ್ಯೆಶಾಸ್ತ್ರ, ಆರ್ಥಿಕತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಫಲವತ್ತತೆ ಮತ್ತು ಸಾಮಾಜಿಕ ಜನಸಂಖ್ಯಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ್ ಗೋಲಿ ಹೇಳುತ್ತಾರೆ.* ಐದನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS5) ಮಾಹಿತಿಯ ಪ್ರಕಾರ, ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ - ಕೇವಲ ಮೂರು ರಾಜ್ಯಗಳು ಮಾತ್ರ ಒಟ್ಟು ಶಿಶುಗಳ ಜನನ ದರಗಳನ್ನು ಹೊಂದಿವೆ (ಮಹಿಳೆ ತನ್ನ ಜೀವನದಲ್ಲಿ ಹೊಂದಿರುವ ಜನನ ಸರಾಸರಿ ಸಂಖ್ಯೆ) ಬದಲಿ ಮಟ್ಟಕ್ಕಿಂತ ಹೆಚ್ಚು 2.1ರಷ್ಟಿದೆ.* ಪೋಷಕರು ಮಕ್ಕಳನ್ನು ಹೊಂದಲು ಭಾರಿ ಹಣಕಾಸಿನ ಸ್ಥಿತಿಗತಿ ಹೊಂದಿದ್ದರೂ ಶಿಶುಗಳ ಜನನ ಸಂಖ್ಯೆಯಲ್ಲಿ ಕೊರತೆ ಇರುವುದರಿಂದ ಕೇಂದ್ರದ ಸೌಲಭ್ಯ ಪಡೆಯಲು ದೇಶದ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಭಾರತೀಯರು ಹಿನ್ನಡೆ ಕಾಣುತ್ತಿದ್ದಾರೆ.* ದಕ್ಷಿಣ ಭಾರತದ ರಾಜ್ಯಗಳು ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿವೆ, ಆದರೆ ತಲಾ ಆದಾಯ, ಜೀವನ ಮಟ್ಟ ಮತ್ತು ಆರೋಗ್ಯ ಮತ್ತು ಶಿಕ್ಷಣದಂತಹ ಮಾನವ ಅಭಿವೃದ್ಧಿ ಸೂಚಕಗಳ ವಿಷಯದಲ್ಲಿ ಇಲ್ಲ ಎಂದು ಜನಸಂಖ್ಯಾಶಾಸ್ತ್ರಜ್ಞರೊಬ್ಬರು ಎನ್ನುತ್ತಾರೆ * 1.8 ಕ್ಕಿಂತ ಕಡಿಮೆ ಶಿಶುಗಳ ಜನನ ಪ್ರಮಾಣವು ಅವರ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ.* ದಕ್ಷಿಣ ಭಾರತದ ರಾಜ್ಯಗಳು “ಆರೋಗ್ಯ ಸುಧಾರಣೆಗಳು ಮತ್ತು ಸಾಮಾಜಿಕ ಭದ್ರತೆಯ ಮೂಲಕ ಆರೋಗ್ಯವನ್ನು ಬೆಳೆಸಿಕೊಳ್ಳುವುದರಲ್ಲಿ ಸಕ್ರಿಯಗೊಳಿಸುವಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ.