* ಯುಪಿಐ ಪಾವತಿ ವ್ಯವಸ್ಥೆಯನ್ನು ಮಾಲೀವ್ ನಲ್ಲಿ ಜಾರಿಗೊಳಿಸುವ ಕುರಿತು ಭಾರತ ಮತ್ತು ಮಾಲ್ಡೀವ್ಸ್ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. 'ಇದು, ಪ್ರವಾಸೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಆಶಿಸಿದ್ದಾರೆ.* ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮತ್ತು ಮಾಲ್ಮೀವ್‌ನ ಆರ್ಥಿಕ ಅಭಿವೃದ್ಧಿ ಸಚಿವಾಲಯದ ನಡುವೆ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಒಪ್ಪಂದವಾಗಿದೆ ಎಂದು ಜೈಶಂಕರ್ 'ಎಕ್ಸ್' ಜಾಲತಾಣದ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.* ಮಾಲ್ಮೀಕ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್ 'ಭಾರತವು ಯುಪಿಐ ವ್ಯವಸ್ಥೆಯ ಮೂಲಕ ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ' ಎಂದು ತಿಳಿಸಿದರು.* ಭಾರತ ಎಂದಿಗೂ ಮಾಲ್ಮೀವ್‌ನ ಹತ್ತಿರದ ಮೈತ್ರಿ ರಾಷ್ಟ್ರ, ಬೆಲೆಕಟ್ಟಲಾದ ಪಾಲುದಾರ. ಅಗತ್ಯ ಇದ್ದಾಗಲೆಲ್ಲಾ ಭಾರತ ನೆರವಾಗುತ್ತಿದೆ ಎಂದು ಮಾಲ್ಮೀವ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ.