* ಪ್ರತಿ ವರ್ಷ ಆಗಸ್ಟ್ 12 ರಂದು ಅಂತರರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಯುವಕರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆಗಳನ್ನು ಗುರುತಿಸಲು ಇದನ್ನು ಆಚರಿಸಲಾಗುತ್ತದೆ.* 2024ರ ಅಂತರರಾಷ್ಟ್ರೀಯ ಯುವ ದಿನದ ಥೀಮ್ "ಕ್ಲಿಕ್‌ಗಳಿಂದ ಪ್ರಗತಿಗೆ: ಸುಸ್ಥಿರ ಅಭಿವೃದ್ಧಿಗಾಗಿ ಯುವ ಡಿಜಿಟಲ್ ಮಾರ್ಗಗಳು".* ಪ್ರತಿ ದೇಶದ ಭವಿಷ್ಯದ ಕನಸುಗಳಾಗಿರುವ ಯುವ ಸಮೂಹಕ್ಕೆ ಅಭಿವೃದ್ಧಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆ 1999 ಡಿಸೆಂಬರ್ 17ರಂದು ಯುವಕರಿಗಾಗಿಯೇ ಒಂದು ದಿನವನ್ನು ಮೀಸಲಿಡುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತ್ತು. ವಿಶ್ವಸಂಸ್ಥೆಯ ಸೂಚನೆಯ ಅನ್ವಯ ಸದಸ್ಯ ರಾಷ್ಟ್ರಗಳು 2000ನೇ ಇಸವಿಯಿಂದ ಪ್ರತಿ ವರ್ಷದ ಆಗಸ್ಟ್ 12ರಂದು ವಿಶ್ವಯುವ ದಿನವನ್ನು ಆಚರಿಸಲಾಗುತ್ತಿದೆ.* ಅಂತರರಾಷ್ಟ್ರೀಯ ಯುವ ದಿನದ ಉದ್ದೇಶ ಯುವಜನರು ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು.