* ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದ್ವಿಪಕ್ಷೀಯ ಪೂರೈಕೆಯ ಭದ್ರತಾ ವ್ಯವಸ್ಥೆ(security of supply arrangement (SOSA)ಗೆ ಸಹಿ ಹಾಕಿದ್ದು, ಅದರ ಮೂಲಕ ರಾಷ್ಟ್ರೀಯ ರಕ್ಷಣೆಯನ್ನು ಉತ್ತೇಜಿಸುವ ಸರಕು ಮತ್ತು ಸೇವೆಗಳಿಗೆ ಉಭಯ ದೇಶಗಳು ಪರಸ್ಪರ ಆದ್ಯತೆಯ ಬೆಂಬಲವನ್ನು ಒದಗಿಸುತ್ತವೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿಯಾದಾಗ ಈ ಒಪಂದಕ್ಕೆ ಸಹಿ ಹಾಕಲಾಗಿದೆ.* ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಸಹಿ ಮಾಡಲಾದ ಈ ಬದ್ಧವಲ್ಲದ ಒಪ್ಪಂದವು ಪರಸ್ಪರ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ನಿರ್ಣಾಯಕ ರಕ್ಷಣಾ ಸರಕುಗಳು ಮತ್ತು ಸೇವೆಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. * ಭದ್ರತೆಯ ಪೂರೈಕೆ ವ್ಯವಸ್ಥೆ (security of supply arrangement (SOSA) ಅಂತರರಾಷ್ಟ್ರೀಯ ರಕ್ಷಣಾ ಸಹಕಾರದಲ್ಲಿ ಪ್ರಮುಖ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ, ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ. * ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಇಸ್ರೇಲ್, ಇಟಲಿ, ಜಪಾನ್, ಲಾಟ್ವಿಯಾ, ಲಿಥುವೇನಿಯಾ, ನೆದರ್ಲ್ಯಾಂಡ್ಸ್, ನಾರ್ವೆ, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ್, ಸ್ಪೇನ್, ಸ್ವೀಡನ್ ನಂತರ ಭಾರತವು US ನ 18 ನೇ SOSA ಪಾಲುದಾರ ರಾಷ್ಟ್ರವಾಗಿದೆ. SOSA ಒಪಂದವನ್ನು ಮಾಡಿಕೊಂಡ ದೇಶಗಳ ಪಟ್ಟಿಯಲ್ಲಿ ಇದೀಗ ಭಾರತವು ಸೇರಿಕೊಂಡಿದೆ.* ಭದ್ರತೆಯ ಪೂರೈಕೆ ವ್ಯವಸ್ಥೆ (SOSA) ಯ ಮಹತ್ವ - ಪರಸ್ಪರ ಆದ್ಯತಾ ಬೆಂಬಲ - ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು :\- ರಕ್ಷಣಾ ಕೈಗಾರಿಕಾ ಸಹಕಾರವನ್ನು ಉತ್ತೇಜಿಸುವುದು- ಭಾರತದ ಕಾರ್ಯತಂತ್ರದ ಪಾತ್ರವನ್ನು ವಿಸ್ತರಿಸುವುದು - US ರಕ್ಷಣಾ ಸರಬರಾಜುಗಳಿಗೆ ಸುಧಾರಿತ ಪ್ರವೇಶ- ಭವಿಷ್ಯದ ಒಪ್ಪಂದಗಳಿಗೆ ಅಡಿಪಾಯ