* ಭಾರತ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹಿಡಿತ ಹೊಂದಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿ ತೆರಳಿದ ನಂತರ ರಷ್ಯಾ-ಉಕ್ರೇನ್ ಬಿಕ್ಕಟ್ಟು ಬಗೆಹರಿಸಿ ಶಾಂತಿ ಸ್ಥಾಪಿಸುವ ಜಾಗತಿಕ ರಾಜತಾಂತ್ರಿಕ ಪ್ರಯತ್ನದಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದು ಉಕ್ರೇನ್‌‌ನ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸಿ ಅವರು ಅಭಿಪ್ರಾಯಪಟ್ಟಿದ್ದಾರೆ.* ಭಾರತದ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಸಂವಾದ ನಡೆಸಿದ ವೊಲೊಡಿಮಿರ್ ಝಲೆನ್ಸಿ ಅವರು ಉಕ್ರೇನ್‌ಗೆ ಮೋದಿ ಅವರ ಭೇಟಿ ಚಾರಿತ್ರಿಕವಾದುದು. ರಷ್ಯಾ ಮತ್ತು ಅಮೆರಿಕ ನಡುವೆ ಸಮತೋಲನ ಸಾಧಿಸುವ ಬದಲು ನಿಮ್ಮ ರಾಷ್ಟ್ರವು ನಮ್ಮ ಜೊತೆಗೆ ಇರಬೇಕು ಎಂದೇ ನಾನು ಬಯಸುತ್ತೇನೆ" ಎಂದು ಸ್ಪಷ್ಟಪಡಿಸಿದರು.* ಭಾರತವು ಬೃಹತ್ ಪ್ರಭಾವಿ ರಾಷ್ಟ್ರವಾಗಿದ್ದು, ಭಾರತ ಈಗಲೂ ಯುದ್ಧ & ರಷ್ಯಾ ವಿಚಾರದಲ್ಲಿ ನಿಲುವು ಬದಲಾಯಿಸಿಲ್ಲ ಎಂದಿದ್ದಾರೆ ಝಲೆನ್ಸಿ. ಈ ಮೂಲಕ ಯುದ್ಧ ಆದಷ್ಟು ಬೇಗ ನಿಲ್ಲಲಿದೆ ಎಂದು ಉಕ್ರೇನ್‌ ಅಧ್ಯಕ್ಷ ಮುನ್ಸೂಚನೆ ನೀಡಿದ್ದಾರೆ.* ಸೋವಿಯತ್ ರಷ್ಯಾ ಭಾಗವಾಗಿದ್ದ ಉಕ್ರೇನ್ ದೇಶಕ್ಕೆ 1991 ರಲ್ಲಿ ಸ್ವಾತಂತ್ರ್ಯ ಸಿಕ್ಕಿತ್ತು. ಹೀಗೆ ಸೋವಿಯತ್ ರಷ್ಯಾದಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿ ಒಬ್ಬರು ಉಕ್ರೇನ್ ದೇಶಕ್ಕೆ ಭೇಟಿ ನೀಡಿದ್ದು ಇದೇ ಮೊದಲು. ಉಕ್ರೇನ್ ಅಧ್ಯಕ್ಷರು ಕೂಡ ಈ ಬಗ್ಗೆ ಹೆಮ್ಮೆ ಮತ್ತು ಸಂತಸದ ಮಾತು ಆಡಿದ್ದಾರೆ. ಭಾರತದ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.