* ಭಾರತೀಯ ಶಿಕ್ಷಣ ಪದ್ದತಿಯ ಮೂಲಕ ಭೂತಾನ್ ನಲ್ಲಿ ಸ್ಟೆಮ್ (ಪ್ರಾಯೋಗಿಕ ಹಾಗೂ ಸೈದ್ದಂತಿಕವಾಗಿ ಅಭ್ಯಸಿಸುವುದು) ಶಿಕ್ಷಣವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರಗಳ ಶಿಕ್ಷಣ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.* ವರದಿಯ ಪ್ರಕಾರ ಉಭಯ ದೇಶಗಳ ಜಂಟಿ ಹೇಳಿಕೆಯು ಭಾರತ ಮತ್ತು ಭೂತಾನ್ ಜನರಿಂದ ಜನರ ನಡುವಿನ ಸಂಬಂಧವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ.* ಈ ಸಹಯೋಗವು ಭಾರತೀಯ ಶಿಕ್ಷಕರ ಕೊಡುಗೆಯೊಂದಿಗೆ ಭೂತಾನ್‌ನಲ್ಲಿ STEM (science, technology, engineering and math) ಶಿಕ್ಷಣವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.* ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಟೋಬ್ಗೇ ಮಾರ್ಚ್ 14-18 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಜನವರಿ 2024 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನ ಮಂತ್ರಿ ತ್ಶೆರಿಂಗ್ ಟೋಬ್ಗೇ ಅವರ ಮೊದಲ ವಿದೇಶಿ ಭೇಟಿಯಾಗಿದೆ.* ಶಿಕ್ಷಣದ ಜೊತೆಗೆ, ಡಿಜಿಟಲ್ ತಂತ್ರಜ್ಞಾನ, ಸ್ಟಾರ್ಟ್-ಅಪ್‌ಗಳು ಮತ್ತು ಸ್ಟೆಮ್ ನಂತಹ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಕಾರಾತ್ಮಕ ಸಹಯೋಗವನ್ನು ಬಲಪಡಿಸಲು ದೇಶಗಳು ನಿರ್ಧರಿಸಿದವು ಎಂದು ಮೂಲಗಳು ತಿಳಿಸಿವೆ.* ಭೂತಾನ್‌ನ ರಾಯಲ್ ಸರ್ಕಾರಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಆಯೋಜಿಸಿದ ದೂರಸಂವೇದಿ ತಂತ್ರಜ್ಞಾನದ ತಾಂತ್ರಿಕ ಸಾಮರ್ಥ್ಯ-ವರ್ಧನೆಯಂತಹ ಇತ್ತೀಚಿನ ಉಪಕ್ರಮಗಳು ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿನ ಪಾಲುದಾರಿಕೆಯನ್ನು ಉಭಯ ದೇಶಗಳು ಅಂಗೀಕರಿಸಿದವು ಮತ್ತು ಶ್ಲಾಘಿಸಿದವು.