* ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಉದಯೋನ್ಮುಖ ವಿಜ್ಞಾನ ಮತ್ತು ತಂತ್ರಜ್ಞಾನ ನಾವೀನ್ಯತೆ ಸಮಾವೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ, ಮಧ್ಯಂತರ ಬಜೆಟ್ ನಲ್ಲಿ ಘೋಷಿಸಲ್ಪಟ್ಟ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನೆಗೆ ಸಂಬಂಧಿಸಿದ ₹1 ಲಕ್ಷ ಕೋಟಿ ರೂ.ಗಳ ಮಹತ್ವದ ನಿಧಿಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಸಮಯದಲ್ಲಿ ಈ ನಿಧಿ ಕುರಿತು ಮಾಹಿತಿ ನೀಡಿದ್ದರೂ, ಇದು ಖಾಸಗಿ ವಲಯವನ್ನು ಸಂಶೋಧನೆ ಮತ್ತು ನವೀನ ಉಪಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಪ್ರೇರಣೆ ನೀಡಲಿದೆ ಎಂದು ಹೇಳಿದ್ದಾರೆ.* ಈ ಸಮಾವೇಶವು ನವೆಂಬರ್ 3ರಿಂದ 5ರವರೆಗೆ ನಡೆಯಲಿದ್ದು, ನೊಬೆಲ್ ಪ್ರಶಸ್ತಿ ವಿಜೇತರು, ಅಂತರರಾಷ್ಟ್ರೀಯ ವಿಜ್ಞಾನಿಗಳು, ತಂತ್ರಜ್ಞಾನ ತಜ್ಞರು, ನೀತಿ ಸಂಶೋಧಕರು, ಉದ್ಯಮಿಗಳು ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.* ಆರು ವರ್ಷಗಳ ಅವಧಿಗೆ ರೂಪಿಸಲಾದ ಈ RDI ಯೋಜನೆಗೆ ₹1 ಲಕ್ಷ ಕೋಟಿ ರೂ. ವೆಚ್ಚ ನಿಗದಿಯಾಗಿದೆ. 2025–26ನೇ ಸಾಲಿಗೆ ₹20 ಸಾವಿರ ಕೋಟಿ ರೂ. ಅನುಮೋದಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕಡಿಮೆ ಬಡ್ಡಿದರದ ದೀರ್ಘಾವಧಿ ಸಾಲಗಳು, ಷೇರು ಹೂಡಿಕೆಗಳು ಮತ್ತು ಡೀಪ್–ಟೆಕ್ ನಿಧಿಗಳಿಗೆ ನೆರವು ದೊರೆಯಲಿದೆ. ಆದರೆ ಯಾವುದೇ ರೀತಿಯ ಅನುದಾನಗಳು ಅಥವಾ ಕಡಿಮೆ ಅವಧಿಯ ಸಾಲಗಳು ಇರಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.* ಕಳೆದ 10–11 ವರ್ಷಗಳಲ್ಲಿ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮೂಲಭೂತ ಪರಿವರ್ತನೆ ಕಂಡಿದೆ.ಭಾರತ ಈಗ ತಂತ್ರಜ್ಞಾನಗಳ ಬಳಕೆದಾರ ರಾಷ್ಟ್ರವಲ್ಲ; ಅದರ ಮೂಲಕ ಜಾಗತಿಕ ಪರಿವರ್ತನೆಯ ಮುಂಚೂಣಿಗಾಗುತ್ತಿದೆ.ಸಂಶೋಧಕರು, ಉದ್ಯಮಿಗಳು ಮತ್ತು ಯುವ ನಾವೀನ್ಯಕಾರರಿಗೆ ಅನುಕೂಲಕರವಾದ ಆಧುನಿಕ ಪರಿಸರ ವ್ಯವಸ್ಥೆ ರಚನೆಯಾಗಿದೆ. ಎಂದು ಪ್ರಧಾನಮಂತ್ರಿ ಮೋದಿಯವರು ಭಾರತವನ್ನು ಬಣ್ಣಿಸಿದರು.* ಕಳೆದ ದಶಕದಲ್ಲಿ ಭಾರತದ R&D ವೆಚ್ಚ ದ್ವಿಗುಣಗೊಂಡಿದ್ದು, ಸ್ಟಾರ್ಟ್–ಅಪ್ ಮತ್ತು ನವೋದ್ಯಮದ ದೃಷ್ಟಿಯಿಂದ ಭಾರತವು ವಿಶ್ವದಲ್ಲಿ 3ನೇ ದೊಡ್ಡ ಪರಿಸರ ವ್ಯವಸ್ಥೆಯಾಗಿದೆ. ದೇಶದಲ್ಲಿ ನೋಂದಾಯಿತ ಪೇಟೆಂಟ್‌ಗಳ ಪ್ರಮಾಣ 17 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಒಟ್ಟಾರೆ, ಈ RDI ನಿಧಿ ಮತ್ತು ನವೀನ ನೀತಿಗಳು ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆಯಾಗಿವೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.