* ಹಸಿರು ಹೈಡ್ರೋಜನ್‌ (ಜಲಜನಕ) ಚಾಲಿತ ದೇಶದ ಮೊದಲ ಬಸ್‌ಅನ್ನು ದಿಲ್ಲಿಯಲ್ಲಿ ಸೆಪ್ಟೆಂಬರ್ 25 ರಂದು  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಲೋಕಾರ್ಪಣೆಗೊಳಿಸಿದರು.* ಡೀಸೆಲ್, ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ವಾಹನಗಳ ನಂತರ ಈಗ ಭಾರತದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್ ಫ್ಯೂಯಲ್ ಸೆಲ್ ಬಸ್ ಅನ್ನು ಪುಣೆಯಲ್ಲಿ ಅನಾವರಣಗೊಳಿಸಲಾಗಿದೆ.* ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೊಸದಿಲ್ಲಿಯಲ್ಲಿ ಭಾರತದ ಮೊದಲ ಹಸಿರು (Green fuel) ಹೈಡ್ರೋಜನ್ (ಜಲಜನಕ) ಇಂಧನ ಬಸ್‌ಗೆ ಚಾಲನೆ ನೀಡಿದರು.* ಇಂಧನ ಕೋಶವು ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಬಳಸಿಕೊಂಡು ಬಸ್‌ಗೆ ಶಕ್ತಿ ತುಂಬಲು ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತದೆ. ಇದರಿಂದ ಬಸ್ ನಲ್ಲಿರುವ ಬ್ಯಾಟರಿ ಚಾರ್ಜ್ ಆಗುತ್ತದೆ. ಇದು ಅತ್ಯಂತ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದೆ.* ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಗುರುತಿಸಲಾದ ಮಾರ್ಗಗಳಲ್ಲಿ ಗ್ರೀನ್ ಹೈಡ್ರೋಜನ್ ಚಾಲಿತ 15 ಫ್ಯುಯೆಲ್ ಸೆಲ್ ಬಸ್‌ಗಳ ಕಾರ್ಯಾಚರಣೆಯ ಪ್ರಯೋಗಗಳನ್ನು ತೈಲ ಕಂಪನಿ ಇಂಡಿಯನ್‌ ಆಯಿಲ್‌ (Indian Oil) ಆರಂಭಿಸಿದೆ.