* ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕಾದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದೆ.* ಇದನ್ನು ಪ್ರಾಚೀನ ಹಿಂದೂ ಧರ್ಮಗ್ರಂಥ ಪ್ರಕಾರ ಸ್ಥಾಪಿಸಲಾಗಿದ್ದು, ದೇವಸ್ಥಾನದಲ್ಲಿ ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು, ಭಾರತೀಯ ಸಂಸ್ಕ್ರತಿ ಮತ್ತು ನೃತ್ಯ ಪ್ರಕಾರದ ಕೆತ್ತನೆಗಳು ಸೇರಿದಂತೆ ಸುಮಾರು 10,000 ಕೆತ್ತನೆಗಳು ಅಥವಾ ಪ್ರತಿಮೆಗಳನ್ನು ಒಳಗೊಂಡಿದೆ.* ಈ ದೇವಾಲಯವು ಕಾಂಬೋಡಿಯಾದಲ್ಲಿರುವ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಾದ ಪುರಾತನ ಅಂಕೋರ್‌ ವಾಟ್‌ ನಂತರದ 2ನೇ ದೊಡ್ಡ ದೇವಾಲಯವಾಗಿದೆ ಎನ್ನಲಾಗಿದೆ.