* ಅಮೆರಿಕ ಮೂಲದ ಸೆಮಿಕಂಡಕ್ಟರ್‌ ಕಂಪನಿ ಎಎಂಡಿ, ಬೆಂಗಳೂರಿನಲ್ಲಿ ತನ್ನ ಅತಿ ದೊಡ್ಡ ಜಾಗತಿಕ ವಿನ್ಯಾಸ ಕೇಂದ್ರವನ್ನು ಆರಂಭಿಸಿದೆ. * ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಈ ಕೇಂದ್ರವನ್ನು ನವೆಂಬರ್ 28 ರಂದು ಉದ್ಘಾಟಿಸಿದರು. ಭಾರತದಲ್ಲಿ ₹3,300 ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಜುಲೈನಲ್ಲಿ ಘೋಷಿಸಿತ್ತು.* ಬೆಂಗಳೂರಿನ ನೂತನ ಎಎಂಡಿ ಕೇಂದ್ರ ಕೇವಲ ಸೆಮಿಕಂಡಕ್ಟರ್‌ ಕ್ಷೇತ್ರ ಸಂಬಂಧಿ ಸಂಶೋಧನೆಗಳಿಗೆ ಸೀಮಿತಗೊಳ್ಳದೆ ಮೆಶಿನ್‌ ಲರ್ನಿಂಗ್‌, 3ಡಿ ಸ್ಟ್ಯಾಕಿಂಗ್‌ ಮತ್ತು ಕೃತಕ ಬುದ್ಧಿಮತ್ತೆತಂತ್ರಜ್ಞಾನಗಳ ಕುರಿತಾಗಿಯೂ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದೆ.* ಎಎಂಡಿ ಸಂಸ್ಥೆ ಭಾರತದಲ್ಲಿ ಸೆಮಿಕಂಡಕ್ಟರ್‌ ಕ್ಷೇತ್ರದ ಅಭಿವೃದ್ಧಿ ಸಂಬಂಧ 400 ಮಿಲಿಯನ್‌ ಡಾಲರ್‌ ಹೂಡಿಕೆ ನಡೆಸುತ್ತಿರುವುದಾಗಿ ಘೋಷಿಸಿತ್ತು. ಈ ಯೋಜನೆಯ ಭಾಗವಾಗಿ ಬೆಂಗಳೂರಿನಲ್ಲಿ ಜಾಗತಿಕ ಮಟ್ಟದ ವಿನ್ಯಾಸ ಕೇಂದ್ರ ಪ್ರಾರಂಭಗೊಂಡಿದೆ. * ಭಾರತವು ₹1 ಲಕ್ಷ ಕೋಟಿವರೆಗಿನ ಹೂಡಿಕೆಯೊಂದಿಗೆ ಇನ್ನೂ ಮೂರು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಬರಲಿವೆ ಎಂದು ಸಚಿವ ಅಶ್ವಿನಿ ವೈಷ್ಣನ್ ಅವರು ತಿಳಿಸಿದ್ದರು. ತಮಿಳುನಾಡು, ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ಉತ್ತರಪ್ರದೇಶ ರಾಜ್ಯ ಸರ್ಕಾರಗಳೊಂದಿಗೆ ಈ ಚರ್ಚೆ ನಡೆಯುತ್ತಿದೆ.