* ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಭಾರತದ ಕಾರ್ಯಕ್ಕೆ ಕೈಜೋಡಿಸಲು ಅಮೆರಿಕಾ ಮುಕ್ತವಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅವರು ನವೆಂಬರ್ 28 ರಂದು ತಿಳಿಸಿದ್ದಾರೆ.* 'ವಾಣಿಜ್ಯ ಬಳಕೆ ಉದ್ದೇಶಕ್ಕಾಗಿ ಭಾರತವು 2040ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲು ಯೋಜಿಸಿದೆ. ಈ ಕಾರ್ಯದಲ್ಲಿ ಅಮೆರಿಕದ ಸಹಯೋಗ ಬೇಕು ಎಂದು ಭಾರತ ಬಯಸುವುದಾದಲ್ಲಿ ಕೈಜೋಡಿಸಲು ನಾವು ಸಿದ್ಧ. * ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS )(ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್) ಎಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದ್ದು, ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಈ ನಿಲ್ದಾಣದ ನಿರ್ಮಾಣವನ್ನು 1998 ರಲ್ಲಿ ಪ್ರಾರಂಭಿಸಲಾಗಿದ್ದು, 2011 ರ ಉತ್ತರಾರ್ಧದಲ್ಲಿ ಪೂರ್ಣಗೊಳಿಸಬೇಕೆಂದು ನಿರ್ಧರಿಸಲಾಗಿದೆ.