Job Description: * ಭಾರತದ ಸ್ವೀಟಿ ಬೂರಾ ಮತ್ತು ನೀತು ಗಂಗಾಸ್ ರವರು ವಿಶ್ವ ಮಹಿಳಾ ಬಾಕ್ಸಿ೦ಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆದ್ದರು. * ಕೆ.ಡಿ ಜಾಧವ್ ಒಳಾಂಗಣದಲ್ಲಿ ಮಾರ್ಚ್ 26 ರಂದು ನಡೆದ ಲೈಟ್ ಹೆವಿವೇಟ್ ವಿಭಾಗದ ಫೈನಲ್ ನಲ್ಲಿ ಸ್ಪರ್ಧಿಸಿದ ಸ್ವೀಟಿ ಯವರು ಚೀನಾದ ವಾಂಗ್ ಲೀನಾ ಅವರನ್ನು ಸೋಲಿಸುವದರ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.* ಬರ್ಮಿಂಗ್‌ಹ್ಯಾಂ ಕಾಮನ್‌ವೆಲ್ತ್ ಕೂಟದ ಚಿನ್ನದ ಪದಕ ವಿಜೇತೆ ನೀತು ಅವರು 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 5-0 ರಲ್ಲಿ ಮಂಗೋಲಿಯದ ಲುತ್ಪಾಯಿಖಾನ್ ಅಲ್ತಾನ್‌ಸೆಪ್ಪೆ ಗ್ ವಿರುದ್ಧ ಗೆದ್ದರು. ಈ ಇಬ್ಬರು ಬಾಕ್ಸರ್‌ಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಮೊದಲ ಪದಕ ಇದಾಗಿದೆ.