* ಮಾನವಸಹಿತ ಚಂದ್ರಯಾನ ಗುರಿ ಸಾಧಿಸುವ ಯೋಜನೆ ಹೊಂದಿರುವ ಚೀನಾ ಟಿಯಾನ್‌ಗೊಂಗ್‌ ಬಾಹ್ಯಾಕಾಶ ಕೇಂದ್ರಕ್ಕೆ ಸಾಮಾನ್ಯ ಪ್ರಜೆಯನ್ನು ಗಗನಯಾತ್ರಿಯಾಗಿ ಕಳುಹಿಸಲು ಚೀನಾ ಸಿದ್ಧತೆ ನಡೆಸಿದೆ.* 'ಬೀಜಿಂಗ್‌ನ ಬೀಹ್ಯಾಂಗ್‌ ಯೂನಿವರ್ಸಿಟಿಯ ಪ್ರೊಫೆಸರ್ ಗೂ ಹೈಚಾವೊ ಅವರು ಯೋಜನೆಯ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವರು' ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ವಕ್ತಾರರು ಮೇ 29 ರಂದು (ಸೋಮವಾರ) ತಿಳಿಸಿದ್ದಾರೆ.