* ಸರ್ಕಾರದ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ “ವಿವಾದ್ ಸೆ ವಿಶ್ವಾಸ್-2' ಯೋಜನೆಯು ಜುಲೈ 15 ರಿಂದ ಪ್ರಾರಂಭವಾಗಲಿದ್ದು, ಗುತ್ತಿಗೆದಾರರಿಗೆ ಅಕ್ಟೋಬರ್ 31ರವರೆಗೆ ಕಾಲಾವಕಾಶ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮೇ 29 ತಿಳಿಸಿದೆ.* 2023-24ನೇ ಸಾಲಿನ ಬಜೆಟ್‌ನಲ್ಲಿ ವಿವಾದ್ ಸೆ ವಿಶ್ವಾಸ್ - 2 ಯೋಜನೆಯನ್ನು ಘೋಷಿಸಲಾಗಿದ್ದು, ಕೇಂದ್ರ ಸರ್ಕಾರವು 50ರಷ್ಟು ಷೇರುಪಾಲು ಹೊಂದಿರುವ ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಉದ್ಯಮಗಳು ಹಾಗೂ ಎಲ್ಲಾ ಸಂಸ್ಥೆಗಳಿಗೂ ಈ ಯೋಜನೆ ಅನ್ವ- ಯಿಸುತ್ತದೆ ಎಂದು ಸಚಿವಾಲಯವು ತಿಳಿಸಿದೆ.