➤  ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಗನಯಾತ್ರಿಯೊಬ್ಬರ ವೈದ್ಯಕೀಯ ಸಮಸ್ಯೆಯ ಕಾರಣದಿಂದ ಇಡೀ ಮಿಷನ್ ಅನ್ನು ನಿಗದಿತ ಅವಧಿಗಿಂತ ಒಂದು ತಿಂಗಳು ಮುಂಚಿತವಾಗಿ ಕೊನೆಗೊಳಿಸಲು ನಾಸಾ (NASA) ನಿರ್ಧರಿಸಿದೆ. ಕ್ರೂ-11 (Crew-11) ತಂಡದ ನಾಲ್ವರು ಸದಸ್ಯರು ಜನವರಿ 14, 2026ರಂದು ಭೂಮಿಗೆ ಮರಳಲಿದ್ದಾರೆ.ಜೂನ್ 2025ರಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಕ್ರೂ-11 ತಂಡವು ಫೆಬ್ರವರಿ ಅಂತ್ಯದವರೆಗೆ ISS ನಲ್ಲಿ ಉಳಿಯಬೇಕಿತ್ತು. ಆದರೆ, ಕಳೆದ ವಾರ ತಂಡದ ಒಬ್ಬ ಅಂತರಿಕ್ಷಯಾತ್ರಿಯಲ್ಲಿ ಕಾಣಿಸಿಕೊಂಡ ವೈದ್ಯಕೀಯ ಸಮಸ್ಯೆಯಿಂದಾಗಿ ಜನವರಿ 8ರಂದು ನಡೆಯಬೇಕಿದ್ದ ಬಾಹ್ಯಾಕಾಶ ನಡಿಗೆಯನ್ನು (Spacewalk) ರದ್ದುಗೊಳಿಸಲಾಗಿತ್ತು. ಈಗ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ತಂಡವನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ.➤ ನಾಸಾ ನೀಡಿರುವ ಮಾಹಿತಿ ಪ್ರಕಾರ, ಬುಧವಾರ (January-14)ಸಂಜೆ 5 ಗಂಟೆ (ಅಮೆರಿಕದ ಪೂರ್ವ ಕಾಲಮಾನ – ET) ನಂತರ ಕ್ರೂ–11 ಯಾನವು ISS ನಿಂದ ಬೇರ್ಪಡುವ ಸಾಧ್ಯತೆ ಇದೆ. ಕ್ಯಾಲಿಫೋರ್ನಿಯಾ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಇಳಿಯುವ ಸ್ಥಳದ ಹವಾಮಾನ ಅನುಕೂಲಕರವಾಗಿದ್ದರೆ ಈ ಕಾರ್ಯಾಚರಣೆ ನಡೆಯಲಿದೆ.➤ ಈ ವಾರ ಆರಂಭದಲ್ಲಿ ಕ್ರೂ–11 ತಂಡದ ಒಬ್ಬ ಅಂತರಿಕ್ಷಯಾತ್ರಿ ವೈದ್ಯಕೀಯ ಸಮಸ್ಯೆ ಅನುಭವಿಸಿದ್ದಾರೆ. ಆದರೆ ವೈದ್ಯಕೀಯ ಗೌಪ್ಯತೆಯ ಕಾರಣದಿಂದ ಸಮಸ್ಯೆಯ ವಿವರಗಳು ಹಾಗೂ ಅಂತರಿಕ್ಷಯಾತ್ರಿಯ ಗುರುತು ಪ್ರಕಟಿಸಲಾಗಿಲ್ಲ. ನಾಸಾ ಅಧಿಕಾರಿಗಳ ಪ್ರಕಾರ, ಪರಿಸ್ಥಿತಿ ಸ್ಥಿರವಾಗಿದ್ದು ಇದು ತುರ್ತು ಸ್ಥಳಾಂತರವಲ್ಲ; ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ➤ ನಾಸಾ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್ ಅವರು ಮಾತನಾಡಿ, ಅಂತರಿಕ್ಷಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ ಕ್ರೂ–11 ತಂಡವನ್ನು ಯೋಜಿತ ಅವಧಿಗೆ ಮುನ್ನವೇ ಭೂಮಿಗೆ ಕರೆತರುವುದೇ ಒಳಿತೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.➤ ಭೂಮಿಗೆ ಮರಳಲಿರುವ ಕ್ರೂ–11 ಸದಸ್ಯರು:=> ನಾಸಾ ಅಂತರಿಕ್ಷಯಾತ್ರಿಗಳು: ಝೇನಾ ಕಾರ್ಡ್‌ಮನ್, ಮೈಕ್ ಫಿಂಕೆ=> ಜಪಾನ್ ಅಂತರಿಕ್ಷಯಾತ್ರಿ: ಕಿಮಿಯಾ ಯುಯಿ=> ರಷ್ಯಾ ಕೋಸ್ಮೋನಾಟ್: ಒಲೆಗ್ ಪ್ಲಾಟೋನೋವ್ಈ ತಂಡವು 2025ರ ಆಗಸ್ಟ್ ಆರಂಭದಲ್ಲಿ ISS ಗೆ ಆಗಮಿಸಿದ್ದು, ಮೂಲತಃ ಫೆಬ್ರವರಿ ಅಂತ್ಯದವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಬೇಕಾಗಿತ್ತು.