* ಪರಿಮಾಣದ ಪ್ರಕಾರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಔಷಧೀಯ ಉತ್ಪಾದಕವಾಗಿದೆ. * ಭಾರತವು ವಿಶ್ವದ 3.5% ಔಷಧಗಳು ಮತ್ತು 200ಕ್ಕೂ ದೇಶಗಳಿಗೆ ವಿವಿಧ ಔಷಧಗಳನ್ನು ರಫ್ತು ಮಾಡುತ್ತಿದೆ. ಇದರಿಂದ ದೇಶದ ಔಷಧ ವಲಯ ವೇಗವಾಗಿ ಬೆಳೆಯುತ್ತಿದೆ. * ದೇಶದಲ್ಲಿ 2030ರ ವೇಳೆಗೆ ಔಷಧ ತಯಾರಿಕೆ ಬೆಳವಣಿಗೆಯ ಮೌಲ್ಯ 130 ಶತಕೋಟಿ ಡಾಲರ್ ಮುಟ್ಟಲಿದೆ ಎಂದು ಡೆಲಾಯ್ಸನ ಶ್ವೇತಪತ್ರ ತಿಳಿಸಿದೆ. * ದಿಲ್ಲಿಯಲ್ಲಿ ನಡೆದ ಅಸೋಚಾಮ್‌ನ ವಾರ್ಷಿಕ ಫಾರ್ಮಾ ಶೃಂಗಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಯಿತು. "ಈ ಬೆಳವಣಿಗೆಯು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಹೂಡಿಕೆಗಳನ್ನು ಅವಲಂಬಿಸಿರುತ್ತದೆ" ಎಂದು ಡೆಲಾಯ್ ಇಂಡಿಯಾದ ಪಾಲುದಾರ ಮತ್ತು ಉದ್ಯಮ ನಾಯಕ ಜಯದೀಪ್ ಘೋಷ್ ಅವರು ತಿಳಿಸಿದ್ದಾರೆ.* ಭಾರತವು 60 ಚಿಕಿತ್ಸಕ ವರ್ಗಗಳಲ್ಲಿ 60,000 ಕ್ಕೂ ಹೆಚ್ಚು ಜೆನೆರಿಕ್ ಔಷಧಿಗಳನ್ನು ಉತ್ಪಾದಿಸುತ್ತದೆ. 2020-21 ರಲ್ಲಿ, ಔಷಧೀಯ ವಲಯವು ಭಾರತದ ಒಟ್ಟು ಮೌಲ್ಯವರ್ಧನೆಯ ಸುಮಾರು 1.32% ಕೊಡುಗೆ ನೀಡಿದೆ.* ಭಾರತದಲ್ಲಿ 12 ಸಾವಿರ ಔಷಧ ತಯಾರಿಸುವ ಕಂಪನಿಗಳಿದೆ. ಅತಿ ಹೆಚ್ಚು ಔಷಧ ತಯಾರಾಗುತ್ತದೆ. ಅದರಲ್ಲಿ 1 ಲಕ್ಷ ಕೋಟಿಯಷ್ಟು ಔಷಧವನ್ನು ಹೊರಗಿನ 200 ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಅಮೆರಿಕಾಕ್ಕೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಬೆಲೆಗೆ ಔಷಧ ಸಿಗುತ್ತದೆ. ಭಾರತದಲ್ಲಿ ಕ್ರೋಸಿನ್‌ ಮಾತ್ರೆ 2 ರೂ.ಗೆ ಲಭಿಸಿದರೆ ಅದೇ ಗುಳಿಗೆ ಅಮೆರಿಕಾದಲ್ಲಿ 200 ರೂ.ಗೆ ದೊರೆಯುತ್ತದೆ ಎಂದು ತಿಳಿಸಿದರು.