* ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಯ (ಎಲ್‌ಡಿಪಿ) ನಾಯಕನ ಸ್ಥಾನಕ್ಕೆ ಶುಕ್ರವಾರ(ಸೆ.27) ನಡೆದ ಚುನಾವಣೆಯಲ್ಲಿ ಜಪಾನ್‌ನ ಹಿರಿಯ ರಾಜಕಾರಣಿ ಹಾಗೂ ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ ಅವರು ಚುನಾಯಿತರಾಗಿದ್ದಾರೆ. ಈ ಮೂಲಕ ಶಿಗೇರು ಇಶಿಬಾ ಅವರು ಜಪಾನ್‌ನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. * ಅಕ್ಟೋಬರ್ 01 ರಂದು ಇಶಿಬಾ ಜಪಾನ್‌ನ 102 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ, ಅದೇ ದಿನ ಫ್ಯೂಮಿಯೊ ಕಿಶಿಡಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. * 67 ವರ್ಷದ ಇಶಿಬಾ ಅವರು ಚುನಾವಣೆಯಲ್ಲಿ ತಮ್ಮ ಪರವಾಗಿ 215 ಮತಗಳನ್ನು ಪಡೆದರು. ಇಶಿಬಾ ಅವರ ಪ್ರತಿಸ್ಪರ್ಧಿ, ಜಪಾನ್‌ನ ಮೊದಲ ಮಹಿಳಾ ನಾಯಕಿಯಾಗಲು ಸ್ಪರ್ಧಿಸುತ್ತಿದ್ದ ಆರ್ಥಿಕ ಭದ್ರತಾ ಸಚಿವೆ ಸಾನೆ ತಕೈಚಿ ಅವರು  194 ಮತಗಳನ್ನು ಪಡೆದು ಸೋಲುಂಡರು.* ಪ್ರಸ್ತುತ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್ತಿನ ಅನುಮೋದನೆಯ ನಂತರ, ಹೊಸ ನಾಯಕ ಹೊಸ ಸಚಿವ ಸಂಪುಟವನ್ನು ರಚಿಸುತ್ತಾರೆ. ಕೆಳಮನೆಯ ಪ್ರಸ್ತುತ ಅಧಿಕಾರಾವಧಿಯು ಅಕ್ಟೋಬರ್ 2025 ರವರೆಗೆ ಇರುತ್ತದೆ.