* ದಿಲ್ಲಿಯ ಪ್ರಮುಖ ರಸ್ತೆಗಳಲ್ಲಿ ಒಂದಾದ ಲ್ಯುಟೆನ್ಸ್ ಪ್ರದೇಶದ 'ಔರಂಗಜೇಬ್ ಲೇನ್' ರಸ್ತೆಗೆ ಮಾಜಿ ರಾಷ್ಟ್ರಪತಿ, ಖ್ಯಾತ ಪರಮಾಣು ವಿಜ್ಞಾನಿಗಳಾದ 'ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಲೇನ್' ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ.* ಮುನ್ಸಿಪಲ್ ಕಾಯದೆ-1994 ರ ಅಡಿಯಲ್ಲಿ  ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅನುಮೋದಿಸಿದೆ ಎಂದು ಎನ್ ಡಿ ಎಮ್ ಸಿ ಉಪಾಧ್ಯಕ್ಷ ಸತೀಶ ಉಪಾದ್ಯಾಯ ತಿಳಿಸಿದ್ದರು.* ಕೌನ್ಸಿಲ್ ತನ್ನ ಅನುಮೋದನೆಯನ್ನು ನೀಡಿತು ಮತ್ತು ದೊಡ್ಡ ಒಳಚರಂಡಿ ಮಾರ್ಗಗಳ ಹೂಳು ತೆಗೆಯುವ ಮತ್ತು ಪುನರ್ವಸತಿ ಕೆಲಸಕ್ಕಾಗಿ ಅಂದಾಜು 25 ಕೋಟಿ ರೂಪಾಯಿಗಳ ವೆಚ್ಚವನ್ನು ಮಂಜೂರು ಮಾಡಿದೆ.