* ಅಸ್ಸಾಂನ ಜೋಗಿಘೋಪಾದಲ್ಲಿ ಭಾರತದ ಮೊದಲ ಇಂಟರ್ನ್ಯಾಷನಲ್ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ನಿರ್ಮಾಣವು 693.97 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನವು ಜಲಮಾರ್ಗಗಳು, ರಸ್ತೆ,ರೈಲು ಮತ್ತು ವಿಮಾನಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ ಮತ್ತು 2023 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸೋನೊವಾಲ್ ತಿಳಿಸಿದ್ದಾರೆ.  *  ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಸಚಿವರಾದ ಶ್ರೀ. ಸರ್ಬಾನಂದ ಸೋನೋವಾಲ್ ಅವರು ಇಂಟರ್ನ್ಯಾಷನಲ್ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿಪರಿಶೀಲನೆ ನಡೆಸಿ ಕಾಮಗಾರಿಯ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.* ಭಾರತದ ಮೊದಲ ಇಂಟರ್ನ್ಯಾಷನಲ್ ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ನ ಅಭಿವೃದ್ಧಿಯು ಸಾರಿಗೆಯ ಮೂಲಕ ನೆರೆಯ ರಾಷ್ಟ್ರಗಳಾದ ಭೂತಾನ್ ಮತ್ತು ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ಪ್ರದೇಶದಲ್ಲಿ ಸಾರಿಗೆಜಾಲವನ್ನು ನವೀಕರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.