Job Description: * ರಷ್ಯಾವು ಅಮೆರಿಕದೊಂದಿಗಿನ ಅಣ್ವಸ್ತ್ರ ನಿಯಂತ್ರಣ ಒಪ್ಪಂದದಿಂದ ಹೊರಬರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬೈಡನ್ ರವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಮಾತುಕತೆ ನಡೆಸಿ ಮತ್ತಷ್ಟು ಶಸ್ತ್ರಾಸ್ತ್ರ ಮತ್ತು ಹಣಕಾಸು ನೆರವು ಘೋಷಿಸಿದರು.* ಉಕ್ರೇನ್ ವಿರುದ್ಧದ ವಿಶೇಷ ಸೇನಾ ಕಾರ್ಯಾಚರಣೆಯು ಫೆ.24 ರಂದು ವರ್ಷ ಪೂರೈಸಿದೆ. ಉಕ್ರೇನ್ ಮೇಲಿನ ಯುದ್ಧವನ್ನು ವ್ಯವಸ್ಥಿತವಾಗಿ ಮುಂದುವರಿಸುವುದಾಗಿ ಪುಟಿನ್‌ ಪ್ರತಿಜ್ಞೆ ಮಾಡಿದ ನಂತರದಲ್ಲಿ 'ಉಕ್ರೇನ್ ಮೇಲಿನ ಆಕ್ರಮಣವು ರಷ್ಯಾ ಕಾರ್ಯತಂತ್ರದ ವೈಫಲ್ಯ' ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಉಂಟು ಬೈಂಕರ್ ಮಂಗಳವಾರ ಹೇಳಿದರು.