Job Description: * ಇತ್ತೀಚಿಗೆ 'ಜೀವವೈವಿಧ್ಯ' ಪರಂಪರೆಯ ತಾಣ ಎಂದು ಘೋಷಿಸಲ್ಪಟ್ಟ ಲಡಾಖ್ ನ ಯಾಯಾ ತ್ಸೋ ಸರೋವರ ಇದು ಲಡಾಖ್ ನ ಮೊದಲ "ಜೀವವೈವಿಧ್ಯ" ಪರಂಪರೆಯ ತಾಣವಾಗಿದೆ. ಯಾಯಾ ತ್ಸೋ ಲಡಾಖ್‌ನಲ್ಲಿ 4,820 ಮೀಟರ್ ಎತ್ತರದಲ್ಲಿರುವ ಸರೋವರವಾಗಿದ್ದು ಇದನ್ನು ಪಕ್ಷಿಗಳ ಸ್ವರ್ಗ ಎಂದು ಕರೆಯಲಾಗುತ್ತದೆ.* ಯಾಯಾ ತ್ಸೋ ಇದು ಲಡಾಖ್ ನಲ್ಲಿರುವ ಒಂದು ಸರೋವರವಾಗಿದ್ದು, ಪಕ್ಷಿಗಳ ಸ್ವರ್ಗ ಎಂದು ಇದನ್ನು ಕರೆಯಲಾಗುತ್ತದೆ. ಈ ಸರೋವರವು 4,820ಮೀಟರ್ ಎತ್ತರದಲ್ಲಿದೆ, ಹಾಗೂ ಕಪ್ಪು ಕತ್ತಿನ ಕ್ರೇನ್ ಗಳಿಗೆ ಜನಪ್ರಿಯ ಸಂತಾನೋತ್ಪತ್ತಿಯ ತಾಣವಾಗಿದೆ.* ಯಾಯಾ ತ್ಸೋ ಸರೋವರವನ್ನು ಜೀವವೈವಿಧ್ಯ ಕಾಯ್ದೆಯಡಿ ಲಡಾಖ್‌ನ ಮೊದಲ ಜೀವವೈವಿಧ್ಯ ಪರಂಪರೆಯ ತಾಣವೆಂದು ಚುಮಥಾಂಗ್ ಗ್ರಾಮ ಪಂಚಾಯತ್, ಜೀವವೈವಿಧ್ಯ ನಿರ್ವಹಣಾ ಸಮಿತಿಯು ಸುರಕ್ಷಿತ ಹಿಮಾಲಯ ಯೋಜನೆಯ ಸಹಯೋಗದೊಂದಿಗೆ ಘೋಷಿಸಿದೆ.* ಸುರಕ್ಷಿತ ಹಿಮಾಲಯ ಯೋಜನೆ: - ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಯೋಜನೆಯಾಗಿದೆ. - 2017 ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಸಹಯೋಗದೊಂದಿಗೆ ಪ್ರಾರಂಭಿಸಲಾಯಿತು. - 6 ವರ್ಷಗಳ ಯೋಜನೆಯಾಗಿದ್ದು, 2023ರ ವರೆಗೆ ಕಾರ್ಯನಿರ್ವಹಿಸಲಿದೆ. - ಈ ಪ್ರದೇಶದಲ್ಲಿ ಹಿಮ ಚಿರತೆಗಳನ್ನು ಸಂರಕ್ಷಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.